Ad Widget

ದೇವ : ವಿಜೃಂಭಣೆಯ 35ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮ ; “ಗೆಳೆಯರ ಬಳಗದ ಕಾರ್ಯಬದ್ಧತೆ ಎಲ್ಲಾ ಯುವಕ ಮಂಡಲಗಳಿಗೆ ಮಾದರಿ” : ಮಿತ್ರದೇವ ಮಡಪ್ಪಾಡಿ

ದೇವ ಗೆಳೆಯರ ಬಳಗ(ರಿ.) ದೇವ ಹಾಗೂ ಜ್ಯೋತಿಲಕ್ಷ್ಮಿ ಮಹಿಳಾ ಮಂಡಲ(ರಿ.) ದೇವ ಇವುಗಳ ಸಂಯುಕ್ತಾಶ್ರಯದಲ್ಲಿ ಆ.16 ರಂದು 35ನೇ ವರ್ಷದ ವಿಜೃಂಭಣೆಯ ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮವು ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರಗತಿಪರ ಕೃಷಿಕರಾದ ಸದಾಶಿವಯ್ಯ ದೇವ ಇವರು ದೀಪ ಪ್ರಜ್ವಲನೆ ಮಾಡುವ ಮೂಲಕ ಉದ್ಘಾಟಿಸಿದರು.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಗೆಳೆಯರ ಬಳಗದ ಕಾರ್ಯದರ್ಶಿ ಜಯಂತ ದೇವ ವಹಿಸಿದ್ದರು.
ವೇದಿಕೆಯಲ್ಲಿ ಊರಿನ ಹಿರಿಯರಾದ ಶೀನಪ್ಪ ಗೌಡ ಪಡ್ಪು, ಪ್ರಗತಿಪರ ಕೃಷಿಕರಾದ ವಸಂತ ಬೊಳ್ಳಾಜೆ, ಗ್ರಾಮ ಪಂಚಾಯತ್ ಸದಸ್ಯರಾದ ರಮೇಶ್ ಪಡ್ಪು, ಜ್ಯೋತಿಲಕ್ಷ್ಮಿ ಮಹಿಳಾ ಮಂಡಲದ ಅಧ್ಯಕ್ಷರಾದ ಶ್ರೀಮತಿ ಕಲಾಪದ್ಮನಾಭ ದೇವ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ನಂತರ ಪುರುಷರಿಗೆ ಮೊಸರು ಕುಡಿಕೆ, ಮಹಿಳೆಯರಿಗೆ ಜಾರುಕಂಬ ಹಾಗೂ 5 ವರ್ಷದೊಳಗಿನ ಮಕ್ಕಳಿಗೆ ಕೃಷ್ಣವೇಷ ಹಾಗೂ ಇತರ ಸ್ಪರ್ಧಾ ಕಾರ್ಯಕ್ರಮಗಳು ನಡೆಯಿತು.
12 ಗಂಟೆಗೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು. ಧಾರ್ಮಿಕ ಉಪನ್ಯಾಸವನ್ನು ಸಾಹಿತಿ ಮತ್ತು ಸಮಾಜ ಸೇವಕರಾದ ಉದಯ ಭಾಸ್ಕರ್ ಸುಳ್ಯ ಇವರು ನಡೆಸಿಕೊಟ್ಟರು.
ಆಗಮಿಸಿದ ಎಲ್ಲರಿಗೂ ಮದ್ಯಾಹ್ನದ ಭೋಜನ ವ್ಯವಸ್ಥೆಯನ್ನು ಮಾಡಲಾಗಿತ್ತು.
ಎಲ್ಲಾ ಸ್ಪರ್ಧಾ ಕಾರ್ಯಕ್ರಮಗಳು ನಡೆದ ನಂತರ ಸಮಾರೋಪ ಸಮಾರಂಭ ಕಾರ್ಯಕ್ರಮ ನಡೆಯಿತು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಗೆಳೆಯರ ಬಳಗದ ಅಧ್ಯಕ್ಷರಾದ ಮುಕುಂದ ಹಿರಿಯಡ್ಕ ವಹಿಸಿದ್ದರು.
ಈ ಸಂದರ್ಭದಲ್ಲಿ 26 ವರ್ಷಗಳ ಕಾಲ ಸೇವೆ ಸಲ್ಲಿಸಿ ವರ್ಗಾವಣೆಯಾದ ದೇವ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಶ್ರೀಮತಿ ಲತಾ.ಕೆ.ಎನ್ ಹಾಗೂ 46 ವರ್ಷಗಳಿಂದ ಅಂಚೆ ವಿತರಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತರಾದ ಕಂದ್ರಪ್ಪಾಡಿ ಶಾಖೆಯ ಪುರುಷೋತ್ತಮ.ಕೆ.ಎಂ ಇವರುಗಳ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು.
ದೇವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಇಲ್ಲಿ ಒಂದರಿಂದ ಐದನೇ ತರಗತಿಯವರೆಗೆ ಕಲಿತು 2024-25ನೇ ಸಾಲಿನಲ್ಲಿ 10ನೇ ತರಗತಿ ಹಾಗೂ ಪಿ.ಯು.ಸಿ ಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ಕು| ಚಸ್ವಿತಾ.ಕೆ(551 ಅಂಕ), ಮನ್ವಿತ್ ರಾಜ್(551 ಅಂಕ), ಕು| ವಂದನಾ(551 ಅಂಕ), ಹಾಗೂ ಪಿ.ಯು.ಸಿ ಯಲ್ಲಿ 485 ಅಂಕ ಪಡೆದ ಕು| ಶರಣ್ಯ ಹಿರಿಯಡ್ಕ ಇವರುಗಳನ್ನು ಸನ್ಮಾನಿಸಲಾಯಿತು.
ದೇವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದರಿಂದ ಐದನೇ ತರಗತಿಯವರೆಗೆ ಕಲಿಯುತ್ತಿರುವಂತಹ ಶಾಲಾ ಮಕ್ಕಳಿಗೆ ಕಲಿಕಾ ಪ್ರೋತ್ಸಾಹಕ ಬಹುಮಾನವನ್ನು ದಾನಿಗಳಾದ ರಮೇಶ್ ಪಡ್ಪು ಮತ್ತು ಮನೆಯವರು ನೀಡಿದರು.
ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಅತಿಥಿಗಳಾದ ಮಿತ್ರದೇವ ಮಡಪ್ಪಾಡಿ ಅವರು ಮಾತನಾಡುತ್ತಾ “ಪ್ರಸ್ತುತ ಯುವಪೀಳಿಗೆಗೆ ಶ್ರೀಕೃಷ್ಣನ ಆದರ್ಶ ಮತ್ತು ಸಂದೇಶದ ಅತೀ ಅಗತ್ಯವಿದೆ. ಯೋಜನಾಬದ್ಧ ಕಾರ್ಯಕ್ರಮ ಸಂಘಟಿಸಿದ ಮತ್ತು ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತಿರುವುದು ಅತ್ಯಂತ ವಿಶೇಷ. ಹಾಗೂ ಗೆಳೆಯರ ಬಳಗದ ಸದಸ್ಯರ ಕಾರ್ಯಬದ್ಧತೆ ಮತ್ತು ನಿಷ್ಠೆ ಎಲ್ಲಾ ಯುವಕ ಮಂಡಲಗಳಿಗೂ ಮಾದರಿಯಾಗಿದೆ” ಎನ್ನುತ್ತಾ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ನಂತರ ವೇದಿಕೆಯಲ್ಲಿ ಉಪಸ್ಥಿತರಿದ್ದ ಯುವಜನ ಸಂಯುಕ್ತ ಮಂಡಳಿ(ರಿ.) ಸುಳ್ಯ ಇದರ ನಿರ್ದೇಶಕರಾದ ಲೋಹಿತ್ ಬಾಳಿಕಳ ರವರು ಮಾತನಾಡುತ್ತಾ “ತಾಲೂಕಿನ ಸುಮಾರು 80 ಯುವಕ ಮಂಡಲಗಳ ಪೈಕಿ 20 ಕ್ರಿಯಾಶೀಲ ಯುವಕ ಮಂಡಲಗಳಲ್ಲಿ ಗೆಳೆಯರ ಬಳಗ(ರಿ.) ದೇವ ಕೂಡ ಒಂದಾಗಿದೆ ಎಂದು ಹೇಳುತ್ತಾ ಕಾರ್ಯಕ್ರಮದ ಆಯೋಜನೆಗೆ ಅಭಿನಂದಿಸಿ ಶುಭ ಹಾರೈಸಿದರು.
ವೇದಿಕೆಯಲ್ಲಿ ಗೆಳೆಯರ ಬಳಗದ ಅಧ್ಯಕ್ಷರಾದ ಮುಕುಂದ ಹಿರಿಯಡ್ಕ, ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಮಿತ್ರದೇವ ಮಡಪ್ಪಾಡಿ, ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಜಯಪ್ರಕಾಶ್ ಮೊಗ್ರ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರಾದ ಜಯರಾಮ್ ಕಡ್ಲಾರು, ಸಂಪಾಜೆ ವಲಯ ಗಸ್ತು ಅರಣ್ಯ ಪಾಲಕರಾದ ಕಾರ್ತಿಕ್ ದೇವ, ಯುವಜನ ಸಂಯುಕ್ತ ಮಂಡಳಿ(ರಿ.) ಸುಳ್ಯ ಇದರ ನಿರ್ದೇಶಕರಾದ ಲೋಹಿತ್ ಬಾಳಿಕಳ, ಸನ್ಮಾನಿತರಾದ ತೀರ್ಥಮಜಲು ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಲತಾ.ಕೆ.ಎನ್, ನಿವೃತ್ತ ಅಂಚೆ ವಿತರಕರಾದ ಪುರುಷೋತ್ತಮ.ಕೆ.ಎಮ್, ಗ್ರಾಮ ಪಂಚಾಯತ್ ಸದಸ್ಯರಾದ ರಮೇಶ್ ಪಡ್ಪು, ದೇವ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಲಿಖಿತಾ ಪಾರೆಪ್ಪಾಡಿ, ಜ್ಯೋತಿಲಕ್ಷ್ಮಿ ಮಹಿಳಾ ಮಂಡಲದ ಅಧ್ಯಕ್ಷರಾದ ಶ್ರೀಮತಿ ಕಲಾಪದ್ಮನಾಭ ದೇವ ಉಪಸ್ಥಿತರಿದ್ದರು.
ಕೊನೆಯಲ್ಲಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಎಲ್ಲಾ ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಗೆಳೆಯರ ಬಳಗದ ಗೌರವಾಧ್ಯಕ್ಷರಾದ ಯೋಗೀಶ್ ದೇವ ಸ್ವಾಗತಿಸಿದರು. ಸದಸ್ಯರಾದ ಉಮೇಶ್ ಬೀರ್ಮಕಜೆ ಧನ್ಯವಾದ ಸಮರ್ಪಿಸಿದರು. ರಮೇಶ್ ಮೆಟ್ಟಿನಡ್ಕ ಕಾರ್ಯಕ್ರಮ ನಿರೂಪಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading