Ad Widget

ಬೆಳ್ಳಾರೆ : ಮಾನವ ಬಂಧುತ್ವ ವೇದಿಕೆಯ ಸಭೆ

ಮಾನವ ಬಂಧುತ್ವ ವೇದಿಕೆ ಸುಳ್ಯ ತಾಲೂಕು ಇದರ ಸಭೆಯು ಬೆಳ್ಳಾರೆಯ ರಾಜೀವ್ ಗಾಂಧಿ ಸೇವಾ ಕಟ್ಟಡದಲ್ಲಿ ಆ 16 ರಂದು ನಡೆಯಿತು.ಮಾನವ ಬಂಧುತ್ವ ವೇದಿಕೆಯ ಕರಾವಳಿ ವಿಭಾಗೀಯ ಸಂಚಾಲಕರಾದ ಸತೀಶ್ ಕುಮಾರ್ ಕೆ.ಎಸ್ ತಮ್ಮ ಭಾಷಣದಲ್ಲಿ ಸ್ವರಾಜ್ಯ ಭಾರತದ ನೈಜ ಘಟನಾವಳಿಗಳ ಬಗ್ಗೆ ವಿವರಿಸಿ ಹೇಳಿದರು. ಪಹಲ್ಗಾಂನಲ್ಲಿ ಉಗ್ರರ  ದಾಳಿಯ ನೋವುಗಳನ್ನು ವಿವರಿಸಿದರು. ಮಾನವ ಬಂಧುತ್ವ ವೇದಿಕೆಯ ಜಿಲ್ಲಾಧ್ಯಕ್ಷರಾದ ಜಯರಾಮ ಪೂಜಾರಿ, ಮಾನವ ಬಂಧುತ್ವ ವೇದಿಕೆಯ ಉಳ್ಳಾಲ ನಗರ ಸಂಚಾಲಕರಾದ ದಿನೇಶ್ ಮೂಳೂರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

. . . . . . . . .

ಮಾಜಿ ತಾ.ಪಂ ಸದಸ್ಯ ಮಾನವ ಬಂಧುತ್ವ ವೇದಿಕೆಯ ತಾಲೂಕು ಸಮಿತಿ ಸಂಚಾಲಕ ಅನಿಲ್ ರೈ ಚಾವಡಿಬಾಗಿಲು ಬೆಳ್ಳಾರೆ ಸಭಾಧ್ಯಕ್ಷತೆಯನ್ನು ವಹಿಸಿದ್ದರು.ಮಾಜಿ ಗ್ರಾ.ಪಂ ಉಪಾಧ್ಯಕ್ಷ ವಿಠಲದಾಸ್ ಎನ್.ಎಸ್.ಡಿ., ಮಾನವ ಬಂಧುತ್ವ ವೇದಿಕೆಯ ಸುಳ್ಯ ತಾಲೂಕು ಸಮಿತಿ ಸಂಚಾಲಕರಾದ ಹಮೀದ್ ಹೆಚ್.ಎಂ,ಬೆಳ್ಳಾರೆ, ಬೆಳ್ಳಾರೆ ಗ್ರಾ.ಪಂ ಮಾಜಿ ಉಪಾಧ್ಯಕ್ಷ ಕಂದಸ್ವಾಮಿ ದರ್ಖಾಸ್ತು, ಬೆಳ್ಳಾರೆ ಗ್ರಾ.ಪಂ ಸದಸ್ಯ ಮಣಿಕಂಠ ಕಲ್ಲೋಣಿ, ವಕೀಲರು
ಸುಳ್ಯ ತಾಲೂಕು ಮಾನವ ಬಂಧುತ್ವ ವೇದಿಕೆಯ ಕಾನೂನು ಸಲಹೆಗಾರರಾದ ಧರ್ಮಪಾಲ ಕೊಯಿಂಗಾಜೆ,ರಝಾಖ್ ಬಂಡಿಮಜಲು,ಜಮಾಲ್ ಮಣಿಮಜಲು,ಮಜೀದ್ ಬಾಳಿಲ ವೇದಿಕೆಯಲ್ಲಿ ಉಪಸ್ಥಿತರಿದ್ದರು.

. . . . . . .

ಯುವಕವಿ ಎಂ.ಎ.ಮುಸ್ತಫಾ ಬೆಳ್ಳಾರೆ ಸ್ವಾಗತಿಸಿ,ಬೆಳ್ಳಾರೆ ಜೇಸಿಐ ಮಾಜಿ ಅಧ್ಯಕ್ಷ ಜಯರಾಮ ಉಮಿಕ್ಕಳ ನಿರೂಪಣೆ ನೀಡಿದರು.ಬೆಳ್ಳಾರೆ ಗ್ರಾ.ಪಂ ಸದಸ್ಯ ವಿಠಲ್ದಾಸ್ ಎನ್.ಎಸ್.ಡಿ ಧನ್ಯವಾದ ಸಮರ್ಪಿಸಿದರು.

ವರದಿ-ಎಂ.ಎ.ಮುಸ್ತಫಾ ಬೆಳ್ಳಾರೆ


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading