Ad Widget

ಪಳ್ಳಿಮಜಲು : 79ನೇ ಸ್ವಾತಂತ್ರ್ಯ ದಿನಾಚರಣೆ

ಬೆಳ್ಳಾರೆ ಗ್ರಾಮದ ಪಳ್ಳಿಮಜಲು ಅಬೂಬಖರ್ ಸ್ವಿದ್ದೀಖ್(ರ) ಮಸೀದಿಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.
ಸಿರಾಜುಲ್ ಇಸ್ಲಾಂ ಸೆಕೆಂಡರಿ ಮದರಸ ಪಳ್ಳಿಮಜಲು ಮುಖ್ಯೋಪಾಧ್ಯಾಯರಾದ ಮಹಮೂದ್ ಸಖಾಫಿ ದು:ಆ ನೆರವೇರಿಸಿದರು.
ದ್ವಜಾರೋಹಣವನ್ನು ಸಿರಾಜುಲ್ ಇಸ್ಲಾಂ ಖೊಮ್ಮಿಟೆ ಪಳ್ಳಿಮಜಲು ಅಧ್ಯಕ್ಷರಾದ ಹನೀಫ್ ಸಲಾಲ  ನೆರವೇರಿಸಿದರು.
ಪಳ್ಳಿಮಜಲು ಮಸೀದಿ ಖತೀಬರಾದ ರಫೀಖ್ ಅಹ್ಸನಿ ಉಸ್ತಾದರು ಸ್ವಾತಂತ್ರ್ಯೋತ್ಸವ ಸಂದೇಶವನ್ನು ನೀಡಿ ನಮ್ಮ ಭಾರತವು ಸರ್ವ ಧರ್ಮೀಯರು ಒಂದಾಗಿ ಬಾಳುವ ಶಾಂತಿಯ ತೋಟ ಎನ್ನುತ್ತಾ ಭಾರತೀಯ ಸರ್ವ ಧರ್ಮಗಳ ಸ್ವಾತಂತ್ರ್ಯ ಹೋರಾಟಗಾರರ ಸುಂದರವಾದ ಪಾತ್ರಗಳನ್ನು ಸ್ಮರಿಸಿದರು.
ಪ್ರತಿಜ್ಞಾ ವಿಧಿ ಬೋಧನೆ, ಸ್ಪರ್ಧೆಗಳಲ್ಲಿ ವಿಜೇತರಾದ ಇಲ್ಲಿನ ಮದರಸ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆಗಳು ನಡೆದವು.
ಖೊಮ್ಮಿಟೆ ಪ್ರ.ಕಾರ್ಯದರ್ಶಿ ದಾವೂದ್ ಝಂ.ಝಂ, ಉಪಾಧ್ಯಕ್ಷ ಅಶ್ರಫ್ ನೇಲ್ಯಮಜಲು, ಕೋಶಾಧಿಕಾರಿ ಇಬ್ರಾಹಿಂ.ಎಂ.ಹೆಚ್, ಸ್ವಲಾತ್ ಖೊಮ್ಮಿಟೆ ಅಧ್ಯಕ್ಷ ಮೂಸಾ ಬೀಡು, ಪ್ರ.ಕಾರ್ಯದರ್ಶಿ ಶರೀಫ್ ಕೆ.ಎಂ, ಮದರಸ ಮೇಲ್ನೋಟ‌ ಸಮಿತಿ ಪ್ರ.ಕಾರ್ಯದರ್ಶಿ ಶಾಫಿ ಬಿ.ಎಂ,
ಉಪಸ್ಥಿತರಿದ್ದರು.
ಖೊಮ್ಮಿಟೆ ಸದಸ್ಯ ಮುನೀರ್ ಬೀಡು ಧನ್ಯವಾದ ಸಲ್ಲಿಸಿದರು.
ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮಕ್ಕೆ ತೆರೆ ಬಿದ್ದಿತು.(ವರದಿ : ಎಂ.ಎ.ಮುಸ್ತಫಾ ಬೆಳ್ಳಾರೆ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading