Ad Widget

ಚೊಕ್ಕಾಡಿ ವಿದ್ಯಾಸಂಸ್ಥೆಗಳು ಕುಕ್ಕುಜಡ್ಕ : ಸ್ವಾತಂತ್ರ್ಯೋತ್ಸವ

ಚೊಕ್ಕಾಡಿ ವಿದ್ಯಾಸಂಸ್ಥೆಗಳು ಕುಕ್ಕುಜಡ್ಕದಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಗಸ್ಟ್ 15ರಂದು ಆಚರಿಸಲಾಯಿತು. ಚೊಕ್ಕಾಡಿ ಎಜ್ಯುಕೇಶನ್ ಸೊಸೈಟಿ(ರಿ.) ಕುಕ್ಕುಜಡ್ಕ ಇದರ ಅಧ್ಯಕ್ಷರೂ, ಕರ್ನಾಟಕ ಸರ್ಕಾರದ ಮಾಜಿ ಮಂತ್ರಿಗಳೂ ಆದ ಎಸ್. ಅಂಗಾರ ಅವರು ಧ್ವಜಾರೋಹಣಗೈದು ಗಾಂಧೀಜಿ ಮತ್ತು ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಶುಭಹಾರೈಸಿದರು.
ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಕಾರ್ಯದರ್ಶಿ ತೇಜಸ್ವಿ ಕಡಪಳ, ನಿರ್ದೇಶಕರಾದ ಆನಂದ ಚಿಲ್ಪಾರು, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾದ ವಿಶ್ವನಾಥ ಮೂಕಮಲೆ ಅವರು ಉಪಸ್ಥಿತರಿದ್ದರು. ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕದ ಮುಖ್ಯೋಪಾಧ್ಯಾಯರಾದ ಸಂಕೀರ್ಣ ಚೊಕ್ಕಾಡಿ ಸ್ವಾಗತಿಸಿದರು. ಚೊಕ್ಕಾಡಿ ಆಂಗ್ಲಮಾಧ್ಯಮ ಶಾಲೆ ಕುಕ್ಕುಜಡ್ಕದ ಮುಖ್ಯೋಪಾಧ್ಯಾಯಿನಿ ಭವ್ಯಾ, ಶಾಲಾ ಶಿಕ್ಷಕ ಮತ್ತು ಸಿಬ್ಬಂದಿ ವರ್ಗ, ವಿದ್ಯಾರ್ಥಿ ವೃಂದದವರು ಹಾಜರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading