Ad Widget

ಸುಬ್ರಹ್ಮಣ್ಯ : ಇನ್ನರ್ ವ್ಹೀಲ್ ಕ್ಲಬ್ ಗೆ ಚೇರ್ಮನ್ ಭೇಟಿ ; ಆಟಿ ಆಚರಣೆ

ಸುಬ್ರಹ್ಮಣ್ಯ ಆಗಸ್ಟ್ 12 : ಸುಬ್ರಹ್ಮಣ್ಯ ಇನ್ನರ್ ವ್ಹೀಲ್ ಕ್ಲಬ್ ಗೆ ಜಿಲ್ಲಾ ಚೇರ್ಮೆನ್ ಶಬರಿ ಕಡಿದಾಳ್ ಸೋಮವಾರ ಅಧಿಕೃತ ಭೇಟಿ ನೀಡಿದರು.
ಶಬರಿ ಕಡಿದಲ್ ಅವರು ಶಿವಮೊಗ್ಗ ಮೂಡಿಗೆರೆ ಇನ್ನರ್ ವಿಲ್ ಕ್ಲಬ್ ನಲ್ಲಿ ಬಹಳಷ್ಟು ಸಮಾಜಮುಖಿ ಕೆಲಸ ಕಾರ್ಯಗಳನ್ನು ಮಾಡಿ ವಿವಿಧ ಹುದ್ದೆಗಳನ್ನು ಅಲಂಕರಿಸಿ ಇದೀಗ ಜಿಲ್ಲಾ ಚೇರ್ಮನ್ ಆಗಿ ಸುಬ್ರಹ್ಮಣ್ಯ ಕ್ಲಬ್ ಗೆ ಅಧಿಕೃತವಾಗಿ ಭೇಟಿ ನೀಡಿರುವರು.
ಸುಬ್ರಹ್ಮಣ್ಯ ಇನ್ನರ್ ವ್ಹೀಲ್ ಕ್ಲಬ್ ನ ಅಧ್ಯಕ್ಷೆ ವಿಮಲ ರಂಗಯ್ಯ, ಕಾರ್ಯದರ್ಶಿ ಶೋಭಾ ಗಿರಿಧರ್ ಹಾಗೂ ಸದಸ್ಯರುಗಳು ಅವರನ್ನು ಬರಮಾಡಿಕೊಂಡರು.
ಶಬರಿ ಕಡಿದಾಳ್ ಅವರು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.
ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ಇನ್ನರ್ ವ್ಹೀಲ್ ಕ್ಲಬ್ ನ ಅಧ್ಯಕ್ಷರು ಹಾಗೂ ಎಲ್ಲಾ ಸದಸ್ಯರುಗಳನ್ನು ಸೇರಿಸಿ ಕ್ಲಬ್ ಅಸೆಂಬ್ಲಿ ಮಾಡಿದರು.
ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ಇನ್ನರ್ ವ್ಹೀಲ್ ಕ್ಲಬ್ ವತಿಯಿಂದ ನಡೆದ ಕಾರ್ಯಚಟುವಟಿಕೆಗಳನ್ನು ಶ್ಲಾಘಿಸಿದರು.
ಇದೇ ಸಂದರ್ಭದಲ್ಲಿ ಕ್ಲಬ್ ವತಿಯಿಂದ ಆಟಿ ಆಚರಣೆಯನ್ನು ಕೂಡ ನಡೆಸಲಾಯಿತು.
ಕ್ಲಬ್ ನ ಎಲ್ಲಾ ಸದಸ್ಯರು ಸುಮಾರು 15ಕ್ಕೂ ಮಿಕ್ಕಿ ವಿವಿಧ ಬಗೆಯ ಆಟಿಯ ತಿನಿಸುಗಳನ್ನು ಸಿದ್ಧಪಡಿಸಿ ಆಚರಣೆಯಲ್ಲಿ ಭಾಗವಹಿಸಿದ್ದರು.
ಆಟಿ  ಆಚರಣೆಯನ್ನು ಶಬರಿ ಕಡಿದಾಳ್ ಅವರು ಚೆನ್ನೆಮಣೆ ಆಡುವ ಮೂಲಕ ಅಧಿಕೃತವಾಗಿ ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ಸುಬ್ರಹ್ಮಣ್ಯ ರೋಟರಿ ಕ್ಲಬ್ ನ ಅಧ್ಯಕ್ಷ ಜಯಪ್ರಕಾಶ್ ಮುಖ್ಯ ಅತಿಥಿಯಾಗಿದ್ದರು.
ಈ ಸಂದರ್ಭದಲ್ಲಿ ಇನ್ನರ್ ವ್ಹೀಲ್ ಕ್ಲಬ್ ನ ಸಚಿತ ಗೋಪಾಲ್, ಜಾನಕಿ ವೆಂಕಟೇಶ್, ಲೀಲಾ ವಿಶ್ವನಾಥ್, ಸರೋಜಾ ಮೈಲಪ್ಪ, ಸುನೀತ ನವೀನ್ ವಾಲ್ತಾಜೆ, ಶ್ರೀಜಾ ಚಂದ್ರಶೇಖರ್, ವೇದ ಶಿವರಾಮ್ ಚಂದ್ರ ಹೊನ್ನಪ್ಪ, ಭಾರತಿ ದಿನೇಶ್, ಸೌಮ್ಯ ದಿನೇಶ್, ಅಕ್ಷತಾ ಕಲ್ಕುದಿ, ರೋಟರಿ ಕ್ಲಬ್ ನ ಸದಸ್ಯರು ಹಾಗೂ ಆಹ್ವಾನಿತರು ಭಾಗವಹಿಸಿದ್ದರು.
ಇನ್ನರ್ ವ್ಹೀಲ್ ಕ್ಲಬ್ ನ ಕಾರ್ಯದರ್ಶಿ ಶೋಭಾ ಗಿರಿಧರ್ ಅವರ ಹುಟ್ಟುಹಬ್ಬವನ್ನು ಕೂಡ ಈ ಸಂದರ್ಭದಲ್ಲಿ ಆಚರಿಸಲಾಯಿತು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading