Ad Widget

ಸಂಪಾಜೆ : ಓಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಹಾಗೂ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಸ್ವಚ್ಛತಾ ಕಾರ್ಯ

ಒಡಿಯೂರು ಶ್ರೀಗಳ ಜನ್ಮದಿನದ ಅಂಗವಾಗಿ ಗ್ರಾಮ ವಿಕಾಸ ಯೋಜನೆ ಸಂಪಾಜೆ ಘಟ ಸಮಿತಿ ನೇತೃತ್ವದಲ್ಲಿ ಗ್ರಾಮ ಪಂಚಾಯತ್ ಸಂಪಾಜೆ, ಯಶಸ್ವಿ ಯುವಕ ಮಂಡಲ, ಸಂಜೀವಿನಿ ಸ್ವಸಹಾಯ ಸಂಘ, ಗಣೇಶೋತ್ಸವ ಸಮಿತಿ ಜಂಟಿ ಆಶ್ರಯದಲ್ಲಿ ಕಲ್ಲುಗುಂಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಆರ್
ಎಂ.ಎಸ್.ಎ ಪ್ರೌಢ ಶಾಲೆಯ ವಠಾರದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಎಸ್.ಕೆ ಹನೀಫ್, ಮಾಜಿ ಅಧ್ಯಕ್ಷರು ಹಾಲಿ ಸದಸ್ಯರು ಗಳಾದ ಜಿ.ಕೆ ಹಮೀದ್ ಗೂನಡ್ಕ ಹಾಗೂ ಜಗದೀಶ್ ರೈ ಭಾಗವಹಿಸಿದ್ದರು.
ಒಡಿಯೂರು ಸಂಘದ ಪದಾಧಿಕಾರಿಗಳು, ಯಶಸ್ವಿ ಯುವಕ ಮಂಡಲದ ಪದಾಧಿಕಾರಿಗಳು, ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು, ಗಣೇಶೋತ್ಸವ ಸಮಿತಿ ಪದಾಧಿಕಾರಿಗಳು. ಸ್ವಚ್ಛತಾ ಕಾರ್ಯ ನಡೆಸಿಕೊಟ್ಟರು
ಒಡಿಯೂರು ಸಂಘದ ರತ್ನಾವತಿ ಸರ್ವರನ್ನು ಸ್ವಾಗತಿಸಿ, ವಂದಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading