Ad Widget

ರಕ್ಷಾ ನಾಗರಿಕ ಬಳಗ ಮೊಗ್ರ ಇವರಿಂದ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ ಹಾಗೂ ಆರ್ಥಿಕ ನೆರವು

ಮೊಗ್ರ ಕಿನ್ನಿಕುಮೇರಿ ಪರಿಸರದಲ್ಲಿ ಸೇವಾ ಸಂಘಟನೆಯಾಗಿ ಕಾರ್ಯ ನಿರ್ವಹಿಸುತ್ತಿರುವ ರಕ್ಷಾ ನಾಗರಿಕ ಬಳಗದ ವತಿಯಿಂದ ಮೊಗ್ರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರವನ್ನು ವಿತರಿಸಲಾಯಿತು.
ಸಂಘಟನೆಯ ಅಧ್ಯಕ್ಷರಾದ ಲಯನ್ ನಾಗೇಶ್ ತೆಂಕಪ್ಪಾಡಿಯವರು ಸಮವಸ್ತ್ರ ವಿತರಣಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.
ಕಾರ್ಯದರ್ಶಿ ಜೇಸಿ ಜೀವನ್ ಮಲ್ಕಜೆ, ಕೋಶಾಧಿಕಾರಿ ದಯಾನಂದ ಕಿನ್ನಿಕುಮೇರಿ, ಪದಾಧಿಕಾರಿಗಳಾದ ಲಯನ್ ಕರುಣಾಕರ ಎಣ್ಣೆಮಜಲು, ಉಮೇಶ್ ಮಕ್ಕಿ, ತಿಮ್ಮಪ್ಪ ಕಿನ್ನಿಕುಮೇರಿ, ವಸಂತ ಬಲ್ಬೇರಿ ಶಾಲಾ ಮುಖ್ಯ ಶಿಕ್ಷಕರಾದ ಪರಶಿವಮೂರ್ತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಘಟನೆಯ ಸದಸ್ಯರುಗಳಾದ ಅವಿನಾಶ್ ಮಲ್ಕಜೆ, ಮೋಹನದಾಸ್ ಎಣ್ಣೆಮಜಲು, ಗಣೇಶ್ ಕಿನ್ನಿಕುಮೇರಿ, ನಾಗೇಶ್ ಕಿನ್ನಿಕುಮೇರಿ, ಬೆಳ್ಯಪ್ಪ ಬಲ್ಬೇರಿ, ವಾಗೀಶ್ ಮಲ್ಕಜೆ, ಶಾಲಾ ಶಿಕ್ಷಕಿಯರಾದ ಸೌಮ್ಯಾ ಮತ್ತು ರಮ್ಯಾ ಹಾಗೂ ಶಾಲಾ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ನಂತರ ಸಂಘಟನೆಯ ಸದಸ್ಯರು ಇತ್ತೀಚೆಗೆ ಕರೆಂಟ್ ಶಾಕ್ ನಿಂದ ನಿಧನರಾದ ಬಡ ಕುಟುಂಬದ ನವೀನ್ ಮೂವರವರ ಮನೆಗೆ ತೆರಳಿ ಅವರ ಕುಟುಂಬಕ್ಕೆ ಆರ್ಥಿಕ ಧನ ಸಹಾಯ ನೀಡಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading