Ad Widget

“ಛತ್ತೀಸ್ ಘಡ್ ನಲ್ಲಿ ಇಬ್ಬರು ಕ್ರೈಸ್ತ ಧರ್ಮಿಯರ ಬಂಧನ ಸಂವಿಧಾನ ಹಕ್ಕಿನ  ಉಲ್ಲಂಘನೆ” : ಕರ್ನಾಟಕ ಸೀರೋ ಮಲಬಾರ್ ಕ್ಯಾಥೋಲಿಕ್ ಅಸೋಸಿಯೇಷನ್ ಅಧ್ಯಕ್ಷ ಬಿಟ್ಟಿ ಬಿ.ನೆಡುನೀಲಂ ಖಂಡನೆ

ಛತ್ತೀಸ್ ಘಡ್ ನಲ್ಲಿ ಇಬ್ಬರು ಕ್ರೈಸ್ತ ಧರ್ಮಿಯರು ಸೇರಿ ಮೂವರನ್ನು ಸತ್ಯಕ್ಕೆ ದೂರವಾದ ಕಾರಣಗಳನ್ನು ಮುಂದಿಟ್ಟು ಬಂಧಿಸಿ ಜೈಲಿಗೆ ಹಾಕಲಾಗಿದೆ. ಇದು ಅತ್ಯಂತ ಹೀನಾಯ ಕೆಲಸ ಆಗಿದ್ದು,  ಸರಕಾರ ಹಾಗೂ ಕೆಲವು ಸಂಘಟನೆಗಳು ಒಟ್ಟು ಸೇರಿ ಭಾರತದ ಸಂವಿಧಾನದಲ್ಲಿ ಹೇಳಿರುವ ಜಾತ್ಯಾತೀತ  ಹಾಗೂ ಸಮಾಜವಾದ ಹಕ್ಕುಗಳ ಉಲ್ಲಂಘನೆ ಮಾಡಿರುತ್ತದೆ. ಇದು ಭಾರತದ ಪ್ರಜ್ಞಾವಂತ ಜನರು ಒಪ್ಪುವ ಹಾಗಿಲ್ಲ. ಪ್ರಯಾಣಕ್ಕೆ ಬೇಕಾದ ಎಲ್ಲಾ ದಾಖಲೆಗಳು ಅವರ ಪೋಷಕರ ಅನುಮತಿಯೂ ಜೊತೆಯಲ್ಲಿ ಇದ್ದರೂ  ಭಾರತದೊಳಗೆ ಪ್ರಯಾಣ ಮಾಡಲು ಪ್ರಾಯಕ್ಕೆ ಬಂದಂದಹ  ಪ್ರಜೆಗಳಿಗೆ ಸಾಧ್ಯ ಇಲ್ಲ ಎಂದರೆ ಇದು  ಸಂವಿಧಾನದ ಸ್ಪಷ್ಟವಾದ ಉಲ್ಲಂಘನೆ ಕೂಡ ಆಗಿರುತ್ತದೆ. ಈ  ಬಗ್ಗೆ KSMCA ಅತ್ಯಂತ ತೀವ್ರವಾದ ಕಳವಳ ವ್ಯಕ್ತಪಡಿಸಿದ್ದು, ಕೂಡಲೆ ಪ್ರಜಾಪ್ರಭುತ್ವ ನೀಡುವ ಹಕ್ಕಿನ ಆಧಾರದಲ್ಲಿ ಇವರನ್ನು ಜೈಲಿನಿಂದ ಹೊರಕಳುಹಿಸಿ ಕಾನೂನು ಬದ್ಧವಾಗಿ ಬದುಕಲು ಎಲ್ಲರಿಗೂ ಇರುವ ಹಕ್ಕನ್ನು ಎತ್ತಿ ಹಿಡಿಯಬೇಕೆಂದು ಬಿಟ್ಟಿ ನೆಡುನಿಲಂ ರವರ ಅಧ್ಯಕ್ಷತೆಯಲ್ಲಿ KSMCA ಕೇಂದ್ರ ಸಮಿತಿ ಸಭೆಯಲ್ಲಿ ಖಂಡನಾ ನಿರ್ಣಯವನ್ನು ಮಂಡಿಸಲಾಯಿತು.
ನಿರ್ದೇಶಕರಾದ ರೆ.ಫಾ ಆದರ್ಶ್ ಜೋಸೆಫ್, ಪ್ರಧಾನ  ಕಾರ್ಯದರ್ಶಿ ಸೆಬಾಸ್ಟಿಯನ್  ಎಂ.ಜೆ ಕ್ಯಾಥೋಲಿಕ್, ಕಾಂಗ್ರೆಸ್ ಜಾಗತಿಕ ಸಮಿತಿ ಕಾರ್ಯದರ್ಶಿ ಜೈಸನ್ ಪಟ್ಟೇರಿ ಹಾಗೂ ಕೇಂದ್ರ ಸಮಿತಿ ಸದಸ್ಯರು ಪಾಲ್ಗೊಂಡರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading