Ad Widget

ದೇವಚಳ್ಳ ಗ್ರಾ.ಪಂ.ನಲ್ಲಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾದ ಶಿವರಾಮ.ಕೆ ಕುಚ್ಚಾಲರಿಗೆ ಬೀಳ್ಕೊಡುಗೆ

“ಅವರ ಕರ್ತವ್ಯ ನಿಷ್ಠೆ ಎಲ್ಲರಿಗೆ ಮಾದರಿ” – ಭರತ್ ಮುಂಡೋಡಿ

ದೇವಚಳ್ಳ ಗ್ರಾಮ ಪಂಚಾಯತ್ ನಲ್ಲಿ ಸುದೀರ್ಘ 30 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಶಿವರಾಮ.ಕೆ ಕುಚ್ಚಾಲ ಅವರಿಗೆ ಬೀಳ್ಕೊಡುಗೆ ಸಮಾರಂಭ ಇಂದು ಗ್ರಾ.ಪಂ. ಸಭಾಭವನದಲ್ಲಿ ನಡೆಯಿತು.
ಶಿವರಾಮ.ಕೆ ಅವರನ್ನು ಅಭಿನಂದಿಸಿ ಗ್ಯಾರಂಟಿ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷರು ಹಾಗೂ ಮಾಜಿ ಜಿ.ಪಂ ಸದಸ್ಯರಾದ ಭರತ್ ಮುಂಡೋಡಿ ಮಾತನಾಡಿ ಅವರ ಕರ್ತವ್ಯ ನಿಷ್ಠೆಯನ್ನು ಸ್ಮರಿಸುತ್ತಾ “ನಿಷ್ಠೆಯಿಂದ ಕೆಲಸ ಮಾಡುವುದರೊಂದಿಗೆ 30 ವರ್ಷದಲ್ಲಿ ಒಂದೇ ಒಂದು ದೂರು ಬಾರದಂತೆ ಕರ್ತವ್ಯ ಮಾಡಿದ್ದಾರೆ. ಇತರ ಎಲ್ಲಾ ಸಿಬ್ಬಂದಿಗಳಿಗೆ ಮಾದರಿ ಎಂಬಂತೆ ಕೆಲಸ ಮಾಡಿದ್ದಾರೆ” ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಗ್ರಾ.ಪಂ.ಅಧ್ಯಕ್ಷರಾದ ಶೈಲೇಶ್ ಅಂಬೆಕಲ್ಲು ವಹಿಸಿದ್ದರು.
ಈ ಸಂದರ್ಭದಲ್ಲಿ ತಾ.ಪಂ. ಮುಖ್ಯಕಾರ್ಯನಿರ್ವಹಣಾಧಿಕಾರಿಗಳಾದ ರಾಜಣ್ಣ, ಗ್ರಾ.ಪಂ. ಮಾಜಿ ಅಧ್ಯಕ್ಷರುಗಳಾದ ನಿತ್ಯಾನಂದ ಪಾರೆಪ್ಪಾಡಿ, ಮಹಮ್ಮದ್ ಇಕ್ಬಾಲ್ ಎಲಿಮಲೆ , ದಿವಾಕರ ಮುಂಡೋಡಿ, ಸುಲೋಚನಾ ದೇವ, ಗ್ರಾ.ಪಂ. ಸದಸ್ಯರಾದ ಕೃಷ್ಣಪ್ಪ ಗೌಡ ಮಾವಿನಕಟ್ಟೆ, ಪಿಡಿಓ ಗುರುಪ್ರಸಾದ್, ಸಂಜೀವಿನಿ ಒಕ್ಕೂಟದ ಅಧ್ಯಕ್ಷರಾದ ಯಶೋಧ ಬಾಳೆಗುಡ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. 
ಸಿಬ್ಬಂದಿಗಳ ಪರವಾಗಿ ವಿಜಯಕಾಂತ್.ಕೆ ಅಭಿನಂದಿಸಿ ಮಾತನಾಡಿದರು.
ಗ್ರಾ.ಪಂ.ಸದಸ್ಯರಾದ ರಮೇಶ್ ಪಡ್ಪು ಸ್ವಾಗತಿಸಿ, ಶೈಲೇಶ್ ಅಂಬೆಕಲ್ಲು ವಂದಿಸಿದರು. ಗ್ರಂಥಾಲಯ ಮೇಲ್ವಿಚಾರಕಿ ಪ್ರಫುಲ್ಲ ಪಾರೆಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading