Ad Widget

ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ಸುಬ್ರಹ್ಮಣ್ಯ ಶಾಲೆಗೆ ಪ್ರಿಂಟರ್ ಕೊಡುಗೆ

ಸುಬ್ರಹ್ಮಣ್ಯ ಜುಲೈ 23 : ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಸುಬ್ರಹ್ಮಣ್ಯ ಇಲ್ಲಿಗೆ ಸ್ಕ್ಯಾನಿಂಗ್, ಜೆರಾಕ್ಸ್ ಹಾಗೂ ಪ್ರಿಂಟ್‌ ಗಳನ್ನು ಒಳಗೊಂಡ ಪ್ರಿಂಟರ್ ಅನ್ನು ಕೊಡುಗೆಯಾಗಿ ನೀಡಲಾಯಿತು.
ಸುಬ್ರಹ್ಮಣ್ಯದ ಬ್ಯಾಂಕ್ ಆಫ್ ಬರೋಡ ಶಾಖೆಯವರು ಪ್ರಿಂಟರ್ ನ ಪ್ರಾಯೋಜಕರಾಗಿದ್ದರು.
ಸಭಾಧ್ಯಕ್ಷತೆಯನ್ನು ಸುಬ್ರಹ್ಮಣ್ಯ ರೋಟರಿ ಕ್ಲಬ್ ನ ಅಧ್ಯಕ್ಷರಾದ ಜಯಪ್ರಕಾಶ್ ವಹಿಸಿದ್ದರು.
ಸುಬ್ರಹ್ಮಣ್ಯ ಬ್ಯಾಂಕ್ ಆಫ್ ಬರೋಡದ ಮ್ಯಾನೇಜರ್ ಕೃಷ್ಣಪ್ರಸಾದ್ ಅವರು ಪ್ರಿಂಟರ್ ಅನ್ನು ಹಸ್ತಾಂತರಿಸಿ ಮಾತನಾಡುತ್ತಾ “ಇಂದಿನ ಮಕ್ಕಳು ಈಗಿನ ನವಯುಗದಲ್ಲಿ ಶರವೇಗವಾಗಿ ಸಾಗುವುದರೊಂದಿಗೆ ಯಾವುದೇ ಕಾರ್ಯಕ್ರಮಗಳು, ಅಥವಾ ಉಪಯುಕ್ತ ಮಾಹಿತಿಗಳನ್ನು ಪಡೆಯುವಲ್ಲಿ ಮುಂದಡಿ ಇಡಬೇಕಾಗುತ್ತದೆ. ಇಂದು ಸರಕಾರಿ ಶಾಲೆಗಳು ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಎಲ್ಲ ರೀತಿಯ ಸೌಕರ್ಯಗಳನ್ನು ಒದಗಿಸುತ್ತ ಇದೆ. ಇನ್ನಷ್ಟು ಸೌಕರ್ಯಗಳು ಬೇಕಾದಲ್ಲಿ ಸ್ಥಳೀಯ ಸಂಘ ಸಂಸ್ಥೆಗಳು ಈ ಮೂಲಕವಾಗಿ ಕೈಜೋಡಿಸುವುದು ಅತ್ಯಗತ್ಯ” ಎಂದು ನುಡಿದರು.
ಮುಖ್ಯ ಅತಿಥಿಯಾಗಿ ರೋಟರಿ ಅಸಿಸ್ಟೆಂಟ್ ಗವರ್ನರ್ ಬಾಲಕೃಷ್ಣ ಪೈ ಉಪಸ್ಥಿತರಿದ್ದು ಶುಭ ಹಾರೈಸಿದರು.
ಸುಬ್ರಹ್ಮಣ್ಯ ರೋಟರಿ ಕ್ಲಬ್ ನ ಪೂರ್ವಾಧ್ಯಕ್ಷರುಗಳಾದ  ವಿಶ್ವನಾಥ ನಡುತೋಟ, ಗೋಪಾಲ ಎಣ್ಣೆಮಜಲು, ಮೈಲಪ್ಪ ಸಂಕೇಶ, ಶಾಲಾ ಶಿಕ್ಷಕವೃಂದದವರು  ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕರಾದ ಮಾಧವ ಮೂಕಮಲೆ ಧನ್ಯವಾದ ಸಮರ್ಪಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading