Ad Widget

ಸುಬ್ರಹ್ಮಣ್ಯ ರೋಟರಿ ಕ್ಲಬ್ ಅಧ್ಯಕ್ಷರಾದ ಜಯಪ್ರಕಾಶ್ ಅವರಿಗೆ ಎಂ.ಪಿ.ಎಚ್.ಎಫ್ ಪದವಿ

ಸುಬ್ರಹ್ಮಣ್ಯ ಜುಲೈ 23 : ಸುಬ್ರಹ್ಮಣ್ಯ ರೋಟರಿ ಕ್ಲಬ್ ನ ಅಧ್ಯಕ್ಷರಾದ ಜಯಪ್ರಕಾಶ್ ಅವರು ರೋಟರಿ ಅಂತರರಾಷ್ಟ್ರೀಯ ಸ್ಥಾಪಕರಾದ ಪೌಲ್ ಹ್ಯಾರಿಸ್ ಅವರ ನೆನಪಿನಲ್ಲಿ ನೀಡಲಾಗುವ ಎಂ.ಪಿ.ಎಚ್.ಎಫ್ ಪದವಿಯನ್ನು ಪಡೆದಿರುತ್ತಾರೆ.
ಜಯಪ್ರಕಾಶ್ ಅವರು ಸುಬ್ರಹ್ಮಣ್ಯ ರೋಟರಿ ಕ್ಲಬ್ ನ ಪ್ರಾರಂಭದಿಂದ ಕಳೆದ 23 ವರ್ಷಗಳಲ್ಲಿ ಪ್ರಪ್ರಥಮವಾಗಿ ಎಂ.ಪಿ.ಎಚ್.ಎಫ್ ಪಡೆದವರಾಗಿದ್ದಾರೆ.
ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ರಸಾಯನಶಾಸ್ತ್ರ ಉಪನ್ಯಾಸಕರಾಗಿರುವ ಜಯಪ್ರಕಾಶ್ ಅವರು 2010ರಲ್ಲಿ ಸುಬ್ರಹ್ಮಣ್ಯ ರೋಟರಿ ಕ್ಲಬ್ ಅನ್ನು ಸೇರಿ 2019-20 ರಲ್ಲಿ ಕ್ಲಬ್ ನ ಕಾರ್ಯದರ್ಶಿಯಾಗಿ ಜವಾಬ್ದಾರಿ ನಿರ್ವಹಿಸಿರುತ್ತಾರೆ.
2024-25 ನೇ ಸಾಲಿನಲ್ಲಿ ಕ್ಲಬ್ ನ ಖಜಾಂಜಿಯಾಗಿ 2025-26ನೇ ಸಾಲಿನಲ್ಲಿ ಪ್ರತಿಷ್ಠಿತ ಸುಬ್ರಹ್ಮಣ್ಯ ರೋಟರಿ ಕ್ಲಬ್ ನ ಅಧ್ಯಕ್ಷರಾಗಿ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading