Ad Widget

ಮರ್ಕಂಜ : ಆಗಸ್ಟ್ 03 ರಂದು ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಶಿಬಿರ

ಅಮರ ಸಂಘಟನಾ ಸಮಿತಿ(ರಿ.) ಸುಳ್ಯ ಇದರ ಆಶ್ರಯದಲ್ಲಿ ಮರ್ಕಂಜ ಯುವಕ ಮಂಡಲ(ರಿ.) ಮತ್ತು ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗದ ಸಹಕಾರದೊಂದಿಗೆ ಆಗಸ್ಟ್ 03 ಆದಿತ್ಯವಾರದಂದು ಮರ್ಕಂಜ ಯುವಕ ಮಂಡಲ ಸಭಾಭವನದಲ್ಲಿ “ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಶಿಬಿರ” ನಡೆಯಲಿದೆ ಎಂದು ಶಿಬಿರದ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಧಾರ್ ನೋಂದಣಿ ಹಾಗೂ ತಿದ್ದುಪಡಿಗೆ ಬೇಕಾದ ದಾಖಲಾತಿಗಳು : 1)ಜನ್ಮ ದಿನಾಂಕ ಬದಲಾವಣೆಗೆ ಎಸ್.ಎಸ್.ಎಲ್.ಸಿ ಅಂಕಪಟ್ಟಿ, ಜನನ ಪ್ರಮಾಣ ಪತ್ರ, ಪಾಸ್ ಪೋರ್ಟ್
2) ಹೆಸರು ಬದಲಾವಣೆಗೆ ಪಾಸ್ ಪೋರ್ಟ್ ಸೈಜ್ ಫೋಟೋ, ಪಾನ್ ಕಾರ್ಡ್, ಅಂಕಪಟ್ಟಿ, ಪಡಿತರ ಗುರುತಿನ ಚೀಟಿ, ಮತದಾರರ ಗುರುತಿನ ಚೀಟಿ, ಜನನ ಪ್ರಮಾಣ ಪತ್ರ
3)ವಿಳಾಸ ಬದಲಾವಣೆಗೆ ಪಂಚಾಯತ್ ವಿಳಾಸ ದೃಢೀಕರಣ ಪತ್ರ, ಪಡಿತರ ಚೀಟಿ, ತಹಶೀಲ್ದಾರ್ ಅಥವಾ ಗೆಜೆಟೆಡ್ ಆಫೀಸರ್ ಸರ್ಟಿಫಿಕೇಟ್
4)ಹೊಸ ಆಧಾರ್ ನೋಂದಣಿಗೆ(18 ವರ್ಷದ ಕೆಳಗಿನವರಿಗೆ ಮಾತ್ರ) ಜನನ ಪ್ರಮಾಣ ಪತ್ರ, ಎಸ್.ಎಸ್.ಎಲ್.ಸಿ ಅಂಕಪಟ್ಟಿ, ವಾಸ್ತವ್ಯ ದೃಢೀಕರಣ ಪತ್ರ, ಮೊಬೈಲ್ ಸಂಖ್ಯೆ ಜೋಡಣೆ, ಮಕ್ಕಳ ಬಯೋಮೆಟ್ರಿಕ್ ಅಪ್ಡೇಟ್ ಬೇಕಾಗುತ್ತದೆ.
ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಶಿಬಿರದ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಸಂಪರ್ಕ ಸಂಖ್ಯೆಗಳನ್ನು ಸಂಪರ್ಕಿಸಬಹುದು…
ನವೀನ್ ದೊಡ್ಡಿಹಿತ್ಲು : 9741489231
ಗಣೇಶ್ ರೈ ಪಾರೆಪ್ಪಾಡಿ : 9945003046
ನವೀನ್ ನಳಿಯಾರು : 9741018424
ಕುಸುಮಾಧರ ಮುಕ್ಕೂರು : 7019742919
ಪ್ರದೀಪ್ ಬೊಳ್ಳೂರು : 9686893697
ಜಯಪ್ರಸಾದ್ ಸಂಕೇಶ : 9663895705
ಸಾರ್ವಜನಿಕರು ಈ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಶಿಬಿರದ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.(ವರದಿ : ಉಲ್ಲಾಸ್ ಕಜ್ಜೋಡಿ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading