Ad Widget

ಆನೆ ದಾಳಿಯಿಂದ ಕೃಷಿ ಹಾನಿ –  ಕೃಷಿಕರೊಂದಿಗೆ ಶಾಸಕಿ ಭಾಗೀರಥಿ ಮುರುಳ್ಯ ಸಂವಾದ – ಅಧಿಕಾರಿಗಳಿಂದ ಮಾಹಿತಿ

ಕಾಡುಪ್ರಾಣಿಗಳಿಂದ ವಿಶೇಷವಾಗಿ ಆನೆ ದಾಳಿಯಿಂದ ಹಾನಿಗೊಳಗಾಗಿರುವ ಉಬರಡ್ಕ- ಮಿತ್ತೂರು ಗ್ರಾಮದ ಮತ್ತು ಮರ್ಕಂಜ ಗ್ರಾಮದ ರೆಂಜಾಳದ ಕೃಷಿಕರೊಂದಿಗೆ ಸಂವಾದ ಕಾರ್ಯಕ್ರಮವು ಉಬರಡ್ಕ ಸೊಸೈಟಿ ಸಭಾಂಗಣ ಮತ್ತು ಮರ್ಕಂಜದ ಸಭೆಯು ರೆಂಜಾಳ ವಿನಾಯಕ ಸಭಾಭವನದಲ್ಲಿ ನಡೆಯಿತು. ಹಲವಾರು ಕೃಷಿಕರು ತಮ್ಮ ಕೃಷಿ ಹಾನಿಯಾಗಿರುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು, ಸರಕಾರದಿಂದ ಸಿಗುವ ಸವಲತ್ತುಗಳು, ಪರಿಹಾರಗಳ ಬಗ್ಗೆ ಮಾಹಿತಿಯನ್ನು ಅಧಿಕಾರಿಗಳು ತಿಳಿಸಿದರು.

. . . . . . . . .

ಸಭೆಯನ್ನು ಉದ್ದೇಶಿಸಿ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ ಈಗಾಗಲೇ 3ಬಾರಿ ಅರಣ್ಯ ಸಚಿವರನ್ನು ಭೇಟಿಯಾಗಿ ಮಾತುಕತೆ ನಡೆಸಲಾಗಿದೆ ಈಗ ನೀಡುತ್ತಿರುವ ಸಬ್ಸಿಡಿ ಮೊತ್ತವನ್ನು ಶೇಕಡಾ90% ಏರಿಸಬೇಕೆಂದು ಮನವಿ ಸಲ್ಲಿಸಲಾಗಿದೆ ನಮ್ಮ ಮನವಿಗೆ ಸಚಿವರು ಸ್ಪಂದಿಸುವ ಭರವಸೆ ಇದೆ ಎಂದರು.

. . . . . . .

ಉಬರಡ್ಕ ಸೊಸೈಟಿಯಿಂದ ಮತ್ತು ರೆಂಜಳದಲ್ಲಿ ಕೃಷಿಕರ ವತಿಯಿಂದ ಮನವಿ ಸ್ವೀಕರಿಸಲಾಯಿತು.
ಈ ಸಂದರ್ಭದಲ್ಲಿ ಸುಳ್ಯ ವಲಯ ಎಸಿಎಫ್ ಪ್ರಶಾಂತ ಪೈ,ಅರಣ್ಯ ವಲಯ ಅಧಿಕಾರಿ ಮಂಜುನಾಥ, ಕಂದಾಯ ಅಧಿಕಾರಿ ಅವಿನ್ ರಂಗತ್ ಮಲೆ,ಗ್ರಾಮ ಪಂಚಾಯತ್ ಅಧ್ಯಕ್ಷೆ ಪೂರ್ಣಿಮ ಸೂಂತೊಡು,ಉಪಾಧ್ಯಕ್ಷೆ ಚಿತ್ರ ಕುಮಾರಿ,ಸದಸ್ಯ ಪ್ರಶಾಂತ ಪಾನತ್ತಿಲ, ಉಬರಡ್ಕ ಸೊಸೈಟಿ ಅಧ್ಯಕ್ಷ ದಾಮೋದರ ಮದುವೆಗದ್ದೆ, ಮರ್ಕಂಜ ಗ್ರಾಮಪಂಚಾಯತ ಅಧ್ಯಕ್ಷೆ ಗೀತಾ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಹರೀಶ ಕಂಜಿಪಿಲಿ, ಉಬರಡ್ಕ ಸೊಸೈಟಿ ಸಿಇಓ ಜಯಪ್ರಕಾಶ ಉರುಂಡೆ, ಹಾಗೂ ಕೃಷಿಕರು ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading