Ad Widget

ಬೆಳ್ಳಾರೆ ಜ್ಞಾನದೀಪ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿಯ ಪ್ರಮಾಣ ಪತ್ರ ವಿತರಣೆ

ಸಾಧಕ ಶಿಕ್ಷಕಿಯರುಗಳಿಗೆ ಹಾಲ್ ಆಫ್ ಫೇಮ್ ಗೌರವ

ಬೆಳ್ಳಾರೆಯ ಜ್ಞಾನದೀಪ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ವತಿಯಿಂದ ನಡೆಯುತ್ತಿರುವ ಜ್ಞಾನದೀಪ ಮೊಂಟೆಸ್ಸರಿ ಶಿಕ್ಷಕಿಯರ ಪ್ರಮಾಣ ಪತ್ರ ವಿತರಣೆ, ಸಾಧಕ ಶಿಕ್ಷಕಿಯರುಗಳಿಗೆ ಹಾಲ್ ಆಫ್ ಫೇಮ್ 2025 ಅಭಿನಂದನಾ ಕಾರ್ಯಕ್ರಮ ಜ್ಞಾನದೀಪ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.
ಸುಳ್ಯ ಸುದ್ದಿ ಚಾನೆಲ್ ಮುಖ್ಯಸ್ಥ ದುರ್ಗಾಕುಮಾರ್ ನಾಯರ್ ಕೆರೆ, ಭಾರತ್ ಸೇವಕ್ ಸಮಾಜದ ಜಿಲ್ಲಾ ಸಂಯೋಜಕ ರಘುಕುಮಾರ್, ಉಪ್ಪಳದ ನ್ಯೂ ಭಾರತ್ ಕಾಲೇಜು ಶಿಕ್ಷಕ ಸಂಜೀವ.ಕೆ.ಬಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು, 2023-24 ಮತ್ತು 2024-25ನೇ ಸಾಲಿನಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಉದ್ಯೋಗವಕಾಶ ಪಡೆದ ಸಾಧಕ ಶಿಕ್ಷಕಿಯರನ್ನು ಅಭಿನಂದಿಸಿದರು.
ಜ್ಞಾನದೀಪ ಬದುಕಿನ ದಾರಿದೀಪ : ನಾಯರ್ ಕೆರೆ
“ಜ್ಞಾನದೀಪ ಶಿಕ್ಷಣ ಸಂಸ್ಥೆ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿಯನ್ನು ವಿಶಿಷ್ಟ ರೀತಿಯಲ್ಲಿ ನೀಡುವುದರ ಮೂಲಕ ಗ್ರಾಮೀಣ ಭಾಗದ ಅನೇಕರ ಪಾಲಿನ ಬದುಕಿನ ದಾರಿದೀಪವೂ ಆಗಿದೆ” ಎಂದು ದುರ್ಗಾಕುಮಾರ್ ನಾಯರ್ ಕೆರೆ ಶ್ಲಾಘಿಸಿದರು.
ಜ್ಞಾನದೀಪದಿಂದ ಅತ್ಯುತ್ತಮ ಸಾಧನೆ : ರಘುಕುಮಾರ್
ಭಾರತ್ ಸೇವಕ್ “ಸಮಾಜದ ಸಂಯೋಜನೆಯ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿ ಸಂಸ್ಥೆಗಳ ಪೈಕಿ ಜ್ಞಾನದೀಪ ಸಂಸ್ಥೆ ಅತ್ಯುತ್ತಮ ಸಾಧನೆ ಮಾಡುತ್ತಿದೆ” ಎಂದು ಜಿಲ್ಲಾ ಸಂಯೋಜಕ ರಘುಕುಮಾರ್ ಪ್ರಶಂಸಿದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ನಿರ್ದೇಶಕ ಉಮೇಶ್ ಮಣಿಕ್ಕಾರ ಪ್ರಸ್ತಾವಿಸಿ, ಸ್ವಾಗತಿಸಿದರು.
ಶಿಕ್ಷಕಿ ಸಿಂಚನಾ ಕೆ ಪಿ ವಂದಿಸಿದರು.
ಉಪನ್ಯಾಸಕ ಯೋಗೀಶ್ ತಳೂರು ಕಾರ್ಯಕ್ರಮ ನಿರ್ವಹಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading