Ad Widget

ಸುಬ್ರಹ್ಮಣ್ಯ : ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವಾರ್ಷಿಕ ಮಹಾಸಭೆ ; ನೂತನ ಪದಾಧಿಕಾರಿಗಳ ಆಯ್ಕೆ

55ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ ಕಲಾವಿದರಾದ ಕೆ.ಯಜ್ಞೇಶ್ ಆಚಾರ್

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಸುಬ್ರಹ್ಮಣ್ಯ ಇದರ 55ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ ಕಲಾವಿದರಾದ ಕೆ.ಯಜ್ಞೇಶ್ ಆಚಾರ್ ರವರು ಆಯ್ಕೆಗೊಂಡಿದ್ದಾರೆ.
54ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ದಿನೇಶ್ ಮೊಗ್ರ ಅವರ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ನಡೆಯಿತು.
ನೂತನ ಸಮಿತಿಯ ಉಪಾಧ್ಯಕ್ಷರಾಗಿ ದಿನೇಶ್ ಸಂಪ್ಯಾಡಿ, ಚಿದಾನಂದ ಕಂದಡ್ಕ, ಅಚ್ಯುತ ಗೌಡ, ಗಿರೀಶ್ ಆಚಾರ್ಯ ಪೈಲಾಜೆ, ಯಶೋಧಕೃಷ್ಣ ನೂಚಿಲ, ಸುಕೇಶ್ ಬೇಕಲ್ ಅವರು ಆಯ್ಕೆಯಾಗಿದ್ದಾರೆ.
ಸಮಿತಿಯ ಸಂಚಾಲಕರಾಗಿ ಎ.ವೆಂಕಟ್ರಾಜ್ ಹಾಗೂ ರಾಜೇಶ್.ಎನ್.ಎಸ್ ಮುಂದುವರಿದರು.
ಪ್ರಧಾನ ಕಾರ್ಯದರ್ಶಿಯಾಗಿ ರತ್ನಾಕರ ಸುಬ್ರಹ್ಮಣ್ಯ, ಕಾರ್ಯದರ್ಶಿಯಾಗಿ ದೀಪಕ್ ನಂಬಿಯಾರ್, ಪ್ರಧಾನ ಕೋಶಾಧಿಕಾರಿಯಾಗಿ ಶ್ರೀಕೃಷ್ಣ ಶರ್ಮ, ಕೋಶಾಧಿಕಾರಿಯಾಗಿ ದೀಪಕ್.ಹೆಚ್.ಬಿ, ಜತೆ ಕಾರ್ಯದರ್ಶಿಗಳಾಗಿ ಪ್ರಕಾಶ್ ಸುಬ್ರಹ್ಮಣ್ಯ, ಶೇಖರ್ ಕುಕ್ಕೆ, ಶ್ರೀಕುಮಾರ್ ಬಿಲದ್ವಾರ, ಸುಹಾಸ್.ಎಸ್.ಎಸ್, ಸಹ ಕೋಶಾಧಿಕಾರಿಗಳಾಗಿ ನಿತಿನ್ ಭಟ್, ಪ್ರಶಾಂತ್ ಆಚಾರ್ಯ ಅವರು ಆಯ್ಕೆಯಾಗಿದ್ದಾರೆ.
ಉಳಿದಂತೆ ಸಾಂಸ್ಕೃತಿಕ ಸಮಿತಿಯ ಸಂಚಾಲಕರಾಗಿ ಲೋಕೇಶ್.ಬಿ.ಎನ್, ಲೋಕೇಶ್.ಎನ್.ಎಸ್, ಕ್ರೀಡಾ ಸಮಿತಿಯ ಸಂಚಾಲಕರಾಗಿ ಉಮೇಶ್.ಕೆ.ಎನ್, ಸಾಂಸ್ಕೃತಿಕ ಸ್ಪರ್ಧಾ ಸಮಿತಿಯ ಸಂಚಾಲಕರಾಗಿ ರವೀಂದ್ರ.ಕೆ ಸುಬ್ರಹ್ಮಣ್ಯ, ಶೋಭಾಯಾತ್ರೆ ಸಮಿತಿಯ ಸಂಚಾಲಕರಾಗಿ ವೆಂಕಟೇಶ್.ಹೆಚ್.ಎಲ್, ರವಿ ಕಕ್ಕೆಪದವು, ವೈದಿಕ ಸಮಿತಿಯ ಸಂಚಾಲಕರಾಗಿ ನಿರಂಜನ ಭಟ್, ಅದೃಷ್ಟ ಚೀಟಿ ಸಮಿತಿಯ ಸಂಚಾಲಕರಾಗಿ ಪಪ್ಪು ಲೋಕೇಶ್, ಆಹಾರ ಸಮಿತಿಯ ಸಂಚಾಲಕರಾಗಿ ಪ್ರಶಾಂತ್ ಆಚಾರ್ಯ, ಸುಕೇಶ್ ಬೇಕಲ್, ನಿತಿನ್ ಭಟ್, ಅಲಂಕಾರ ಸಮಿತಿಯ ಸಂಚಾಲಕರಾಗಿ ಹರೀಶ್ ಅಗರಿಕಜೆ, ಯಶೋಧಕೃಷ್ಣ ನೂಚಿಲ, ಸುಬ್ರಹ್ಮಣ್ಯ ಮಾನಾಡು, ಹರ್ಷಿತ್ ನೂಚಿಲ ಅವರು ಆಯ್ಕೆಯಾಗಿದ್ದಾರೆ. ಜೊತೆಗೆ ಸಮಿತಿಯ ಸದಸ್ಯರನ್ನು ಹಾಗೂ ಉಪ ಸಮಿತಿಗಳ ಸದಸ್ಯರನ್ನು ಸಭೆಯಲ್ಲಿ ನೇಮಕ ಮಾಡಲಾಯಿತು.(ವರದಿ : ಉಲ್ಲಾಸ್ ಕಜ್ಜೋಡಿ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading