Ad Widget

ಗುತ್ತಿಗಾರಿನಲ್ಲಿ ಕಸಾಪ ವತಿಯಿಂದ ಸರಣಿ ಕಾರ್ಯಕ್ರಮ; ಪರಿಸರ ಸಂರಕ್ಷಣೆಯಿಂದ ಆರೋಗ್ಯಕರ ಜೀವನ ಸಾಧ್ಯ – ಯಶೋಚಂದ್ರ ಪರಮಲೆ


ನಾವು ಎಷ್ಟೇ ತಾಂತ್ರಿಕವಾಗಿ ಬೆಳೆದರು ಪರಿಸರವೇ ನಮ್ಮ ಜೀವಾಳ ಅದನ್ನು ಮುಂದಿನ ಪೀಳಿಗೆಗೆ ಮುಟ್ಟಿಸುವುದು ನಮ್ಮ ಕರ್ತವ್ಯ ಪರಿಸರವನ್ನು ಸಂರಕ್ಷಿಸೋಣ ಎಂದು ಪರಿಸರ ಪ್ರೇಮಿ, ಪ್ರಗತಿಪರ ಕೃಷಿಕ ಯಶೋಚಂದ್ರ ಪರಮಲೆ ಹೇಳಿದರು.
ಅವರು ಜು.16 ರಂದು ಸರಕಾರಿ ಪದವಿ ಪೂರ್ವ ಕಾಲೇಜು ಗುತ್ತಿಗಾರು ಇಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ತಾಲೂಕು ಘಟಕ ಹಾಗೂ  ಕಾಲೇಜಿನ ಸಹಯೋಗದಲ್ಲಿ ನಡೆದ ಪರಿಸರ ಜಾಗೃತಿಯಾನ, ಪರಿಸರ ಗೀತೆ ಗಾಯನ ಹಾಗೂ ಔಷಧ ಸಸ್ಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಸ್ಪರ್ಧಾ ಸರಣಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಸಭಾಧ್ಯಕ್ಷತೆಯನ್ನು ಕಸಾಪ ಅಧ್ಯಕ್ಷ ಚಂದ್ರಶೇಖರ ಪೇರಾಲು ವಹಿಸಿದ್ದರು. ವೇದಿಕೆ ಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪಂಜ ಹೋಬಳಿ ಘಟಕದ ಅಧ್ಯಕ್ಷರಾದ ಬಾಬು ಗೌಡ ಅಚ್ರಪ್ಪಾಡಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ತೇಜಸ್ವಿ ಕಡಪಳ, ಕಾರ್ಯಕ್ರಮ ಸಂಯೋಜಕರಾದ ಯೋಗಿಶ್ ಹೊಸೊಳಿಕೆ, ಕಾಲೇಜು ಪ್ರಾಂಶುಪಾಲರಾದ ಚೆನ್ನಮ್ಮ.ಪಿ, ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ಪೂರ್ಣಿಮಾ.ಯಂ, ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಕೇಶವ ಗೌಡ ಕಾಂತಿಲ, ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ವಿಶ್ವನಾಥ ಸಾಲ್ತಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಯಶೋಚಂದ್ರ ಪರಮಲೆ ರವರನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ವಿದ್ಯಾಭೋಧಿನಿ ಬಾಳಿಲ ಇದರ ನಿವೃತ ಮುಖ್ಯ ಶಿಕ್ಷಕರಾದ ಶಿವರಾಮ ಶಾಸ್ತ್ರಿ, ಬಿಳಿನೆಲೆ ಪ್ರೌಢಶಾಲಾ ನಿವೃತ್ತ ಹಿಂದಿ ಶಿಕ್ಷಕರಾದ ದುಗ್ಗಪ್ಪ ಕುಳ್ಳಂಪ್ಪಾಡಿ, ಪದವಿ ಪೂರ್ವ ಕಾಲೇಜು ಪಂಜ ಇದರ ನಿವೃತ್ತ ಪ್ರಾಂಶುಪಾಲರಾದ ವೆಂಕಪ್ಪ ಕೇನಾಜೆ, ಸಿ.ಆರ್.ಪಿ.ಕುಶಾಲಪ್ಪ ತುಂಬತ್ತಾಜೆ, ನಿವೃತ ರಾಜ್ಯಶಾಸ್ತ್ರ ಉಪನ್ಯಾಸಕರಾದ ರಾಮಚಂದ್ರ ಪಳಂಗಾಯ ಉಪಸ್ಥಿತರಿದ್ದರು.
ಭಾವನ ಸುಗಮ ಸಂಗೀತ ಬಳಗದ  ಕೆ. ಆರ್. ಗೋಪಾಲಕೃಷ್ಣ ಹಾಗೂ ಗಾಯಕಿ ಕು. ಲಿಪಿಶ್ರೀ ಇವರಿಂದ ಪರಿಸರ ಗೀತಾ ಗಾಯನ ಕಾರ್ಯಕ್ರಮ ನಡೆಯಿತು. ಅಂತೆಯೇ ಔಷಧ ಸಸ್ಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು. ಪಂಜ ಹೋಬಳಿ ಘಟಕದ ಅಧ್ಯಕ್ಷರಾದ ಬಾಬು ಗೌಡ ಅಚ್ರಪ್ಪಾಡಿ ಸ್ವಾಗತಿಸಿ, ಕಾಲೇಜು ಪ್ರಾಂಶುಪಾಲರಾದ ಚೆನ್ನಮ್ಮ.ಪಿ ವಂದಿಸಿದರು. ಉಪನ್ಯಾಸಕರಾದ ರಂಜಿತ್ ಅಂಬೆಕಲ್ಲು ಕಾರ್ಯಕ್ರಮ ನಿರೂಪಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading