Ad Widget

ಚೊಕ್ಕಾಡಿ ವಿದ್ಯಾ ಸಂಸ್ಥೆಯ ಸ್ಥಾಪನಾ ದಿನಾಚರಣೆ ಮತ್ತು ಶಾಲಾ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಚೊಕ್ಕಾಡಿ ವಿದ್ಯಾ ಸಂಸ್ಥೆಯ 53ನೇ ವರ್ಷದ ಸ್ಥಾಪನಾ ದಿನಾಚರಣೆ ಮತ್ತು ಶಾಲಾ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜು.14ರಂದು ನಡೆಯಿತು. ಸ್ಥಾಪನಾ ದಿನಾಚರಣೆಯ ಸಮಾರಂಭದ ಸಭಾಧ್ಯಕ್ಷತೆಯನ್ನು ವಹಿಸಿಕೊಂಡವರು ಚೊಕ್ಕಾಡಿ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷರಾದ ಶ್ರೀಯುತ ಎಸ್ ಅಂಗಾರ ಇವರು ಮಾತನಾಡಿ,” ಶಾಲೆಯ ಇತಿಹಾಸದ ಪುಟಗಳನ್ನು ತೆರೆದಾಗ ಅತ್ಯಂತ ಹೆಮ್ಮೆ ಎನಿಸುವಂತಹ ಕಾರ್ಯಗಳು ಈ ಶಾಲೆಯಲ್ಲಿ ನಡೆದಿದೆ ಅತ್ಯುತ್ತಮ ಸಂಘಟನೆಯಿಂದ ಶಾಲೆಯು ಇನ್ನಷ್ಟು ಎತ್ತರಕ್ಕೆ ಬೆಳೆಯಲು ಎಲ್ಲಾ ವಿದ್ಯಾಭಿಮಾನಿಗಳ ಊರವರ ಪೋಷಕರ ಸಹಕಾರ ಅಗತ್ಯ” ಎಂದರು. ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಕೆ.ವಿ.ಜಿ. ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ (ರಿ.) ಸುಳ್ಯ ಇದರ ಪ್ರಧಾನ ಕಾರ್ಯದರ್ಶಿಯಾಗಿರುವ ಅಕ್ಷಯ್ ಕೆ ಸಿ ಅವರು ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದರು. “ವಿದ್ಯಾರ್ಥಿಗಳಲ್ಲಿರುವ ಹುಮ್ಮಸ್ಸು, ಆಸಕ್ತಿ, ಅಭಿರುಚಿ ಬೆಳೆಯಬೇಕಾದರೆ ಪೋಷಕರ ಜವಾಬ್ದಾರಿಯುತ ಹೊಣೆ ಅತಿ ಅಗತ್ಯ. ವಿದ್ಯಾರ್ಥಿಗಳು ಎಲ್ಲಿ ಬೇಕಾದರೂ ತಮ್ಮ ವಿದ್ಯಾಭ್ಯಾಸವನ್ನು ಪಡೆದು ಮರಳಿ ತಮ್ಮ ಊರಿಗೆ ಬಂದು ಅಭಿವೃದ್ಧಿಯ ಕಾರ್ಯದಲ್ಲಿ ತೊಡಗುವುದು ಅತ್ಯಂತ ಅಗತ್ಯ” ಎಂದರು.
ಶಾಲಾ ಆಡಳಿತ ಮಂಡಳಿಯ ಸಂಚಾಲಕರಾಗಿರುವ ಶ್ರೀಯುತ ರಾಧಾಕೃಷ್ಣ ಬೊಳ್ಳೂರು ಅವರು ಮಾತನಾಡಿ,”ಶಾಲೆಯ ಸ್ಥಾಪನೆಯ ಉದ್ದೇಶ ಅದರ ಹಿನ್ನೆಲೆ ಹಾಗೂ ಊರಿನ ಸಹೃದಯಿ ಜನರು ಪಟ್ಟಂತಹ ಪರಿಶ್ರಮದ ಬಗ್ಗೆ ಹಾಗೂ ನಮ್ಮ ವಿದ್ಯಾಸಂಸ್ಥೆಯ ಉನ್ನತಿಗಾಗಿ ಇನ್ನಷ್ಟು ಕೆಲಸ ಕಾರ್ಯಗಳು ಆಗಬೇಕಿದೆ, ಇದಕ್ಕೆ ಎಲ್ಲರ ಸಹಕಾರವು ಅತ್ಯಗತ್ಯ” ಎಂದರು.
ಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಅಣ್ಣಾಜಿ ಗೌಡ ಪೈಲೂರು, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ವಿಶ್ವನಾಥ ಎಂ., ಅಮರ ಮುಡ್ನೂರು ಗ್ರಾಮ ಪಂಚಾಯತಿಯ ಸದಸ್ಯರಾದ ಕೃಷ್ಣಪ್ರಸಾದ್ ಮಾಡಬಾಕಿಲು, ಪ್ರೌಢಶಾಲಾ ಮುಖ್ಯ ಗುರುಗಳಾದ ಸಂಕೀರ್ಣ ಚೊಕ್ಕಾಡಿ ಹಾಗೂ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಭವ್ಯ ಪಿ ಇವರು ಉಪಸ್ಥಿತರಿದ್ದರು.
ಶಾಲಾ ಮುಖ್ಯ ಗುರುಗಳಾದ ಸಂಕೀರ್ಣ ಚೊಕ್ಕಾಡಿ ಪ್ರಾಸ್ತಾವಿಕ ನುಡಿಗಳೊಂದಿಗೆ ಸರ್ವರಿಗೂ ಸ್ವಾಗತವನ್ನು ಮಾಡಿದರು. ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಹಾಗೂ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ತೇಜಸ್ವಿ ಕಡಪಳ ಅವರು ವಂದನಾರ್ಪಣೆಯನ್ನು ನೆರವೇರಿಸಿದರು. ಶಾಲಾ ಶಿಕ್ಷಕರಾದ ಹರಿಪ್ರಸಾದ ಕೆ ಕಾರ್ಯಕ್ರಮವನ್ನು ನಿರೂಪಿಸಿದರು. ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಎಲ್ಲಾ ಸದಸ್ಯರು, ಶಾಲಾ ಹಿರಿಯ ಶಿಕ್ಷಕರು, ಪೋಷಕರು ಊರ ಪರವೂರ ವಿದ್ಯಾಭಿಮಾನಿಗಳು, ಶಿಕ್ಷಕ ವೃಂದದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading