Ad Widget

ಸುಳ್ಯ : ರೋಟರಿ ಸ್ಕೂಲ್ ನಲ್ಲಿ ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಶಿಬಿರ

ಪ್ರಯೋಜನ ಪಡೆದ 176 ಜನ

ರೋಟರಿ ಸಂಯುಕ್ತ ಪದವಿ ಪೂರ್ವ ಕಾಲೇಜು ಸುಳ್ಯ ಇಲ್ಲಿಯ ಜೂನಿಯರ್ ರೆಡ್ ಕ್ರಾಸ್ ಘಟಕ ಮತ್ತು ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗದ ಸಹಕಾರದೊಂದಿಗೆ “ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಶಿಬಿರ” ವು ಜುಲೈ 13 ಆದಿತ್ಯವಾರದಂದು ರೋಟರಿ ಹೈಯರ್ ಪ್ರೈಮರಿ ಸ್ಕೂಲ್ ರಥಬೀದಿ ಸುಳ್ಯದಲ್ಲಿ ಅತ್ಯಂತ  ಯಶಸ್ವಿಯಾಗಿ ನಡೆಯಿತು.
ರೋಟರಿ  ಚಾರಿಟೇಬಲ್ ಟ್ರಸ್ಟ್ ನ ಚೇರ್ಮನ್ ರೊ.ರಾಮ್ ಮೋಹನ್.ಕೆ.ಎನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ರೋಟರಿ ವಿದ್ಯಾ ಸಂಸ್ಥೆಗಳ ಸಂಚಾಲಕರಾಗಿರುವ ರೊ.ಪಿ.ಪಿ.ಪಿ.ಹೆಚ್.ಎಫ್ ಪ್ರಭಾಕರನ್ ನಾಯರ್ ಅವರು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.
ರೋಟರಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಶೋಭಾ ಬೊಮ್ಮೆಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತುಗಳನ್ನಾಡಿ ಸರ್ವರನ್ನೂ ಸ್ವಾಗತಿಸಿದರು.
ಕಾಲೇಜಿನ ರೆಡ್ ಕ್ರಾಸ್ ಘಟಕದ ಸಹನಿರ್ದೇಶಕರಾಗಿರುವ ಉಪನ್ಯಾಸಕರಾಗಿರುವ ಶ್ರೀ ಹರ್ಷಿತ್.ಜಿ.ಜೆ, ವಿದ್ಯಾರ್ಥಿ ನಾಯಕರುಗಳಾದ ಜೀವನ್.ಕೆ ಮತ್ತು ಕು.ದಿಶಾ ಹಾಗೂ ರೊ.ಪ್ರಭಾಕರನ್ ನಾಯರ್ ಸಿ.ಹೆಚ್ ರವರು   ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಬೆಳಗ್ಗಿನಿಂದ ಸಂಜೆ 7ಘಂಟೆಯ ವರೆಗೆ ನಡೆದ ಕಾರ್ಯಕ್ರಮದಲ್ಲಿ ಸುಮಾರು 176 ಆಧಾರ್ ನೋಂದಣಿ ಮಾಡಲಾಯಿತು.
ಪ್ರಜ್ವಲ್  ಚೂಂತಾರು ಮತ್ತು ಮೋಹಿತ್ ಸುಬ್ರಹ್ಮಣ್ಯ ಅವರು ಕಾರ್ಯನಿರ್ವಾಹಕಗಾರರಾಗಿ ಸಹಕರಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading