Ad Widget

ಕೆಂಪು ಕಲ್ಲು, ಮರಳು ಅಭಾವದ ಬಗ್ಗೆ ರಾಜ್ಯ ಸರ್ಕಾರದ ಜನವಿರೋಧಿ ನೀತಿಯ ವಿರುದ್ಧ  ಜು.14 ರಂದು ಸುಳ್ಯದಲ್ಲಿ ಬಿಜೆಪಿ ಪ್ರತಿಭಟನೆ – ವೆಂಕಟ್ ವಳಲಂಬೆ

. . . . . . . . .


ರಾಜ್ಯ ಸರ್ಕಾರದ ಅವಿವೇಕಿ ನಡವಳಿಕೆಗಳಿಂದಾಗಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಕೆಂಪುಕಲ್ಲು ಮತ್ತು ಹೊಯ್ಗೆ ಅಲಭ್ಯವಾದ ಪರಿಣಾಮವಾಗಿ ನಿರ್ಮಾಣ ಕಾಮಗಾರಿಗಳು ಸಂಪೂರ್ಣ ಸ್ಥಗಿತಗೊಂಡಿವೆ. ಇದರಿಂದಾಗಿ ಕಟ್ಟಡ ನಿರ್ಮಾಣ ಕಾರ್ಮಿಕರು, ಲಾರಿ ಚಾಲಕ ಮಾಲಕರು, ಸ್ವಂತ ಸೂರು ಕಟ್ಟಿಕೊಳ್ಳಲು ಹೊರಟಿರುವ ಬಡ ಜನರು ತೀರ ಸಂಕಷ್ಟಕ್ಕೊಳಗಾಗಿದ್ದು ಮಳೆಗಾಲದ ಈ ದಿನಗಳಲ್ಲಿ ಜನತೆ ಹಾಗೂ ಕಾರ್ಮಿಕರು ಬೀದಿಗೆ ಬೀಳುವಂತಾಗಿದೆ. ಅಧಿಕಾರಕ್ಕೆ ಬಂದು ಎರಡು ವರ್ಷಗಳು ಕಳೆದರೂ ಸರಿಯಾದ ಮರಳು ನೀತಿ ರೂಪಿಸದೇ, ಕೆಂಪು ಕಲ್ಲು ಗಣಿಗಾರಿಕೆಗೆ ಸೂಕ್ತ ನಿಯಮಗಳನ್ನು ರೂಪಿಸದೇ ಇದೀಗ ಅಕ್ರಮದ ಹೆಸರಿನಲ್ಲಿ ಎಲ್ಲಾ ಚಟುವಟಿಕೆಗಳನ್ನು ನಿಲ್ಲಿಸಿರುವುದು ರಾಜ್ಯ ಸರ್ಕಾರದ ಜನ ವಿರೋಧಿ ನೀತಿಯಾಗಿದೆ.
ಜಿಲ್ಲೆಯಲ್ಲಿ ಏಕಾಏಕಿ ಮರಳುಗಾರಿಕೆ ಮತ್ತು ಕೆಂಪು ಕಲ್ಲು ಗಣಿಗಾರಿಕೆಯನ್ನು ಸ್ಥಗಿತಗೊಳಿಸಿರುವ ಕಾರಣದಿಂದಾಗಿ ಮರಳಿನ ಬೆಲೆ ಗಗನಕ್ಕೇರಿದೆ. ಕೆಂಪು ಕಲ್ಲಿನ ಬೆಲೆ ದ್ವಿಗುಣಗೊಂಡಿದೆ. ಬಡ ಜನರು ತಮ್ಮ ನಿರ್ಮಾಣ ಪೂರ್ಣಗೊಳಿಸಲಾಗದೆ ಬವಣೆ ಪಡುವಂತಾಗಿದೆ. ಗಣಿಗಾರಿಕೆಯನ್ನೇ ಅವಲಂಬಿಸಿರುವ ಲಾರಿಗಳ ಚಾಲಕರು ಉದ್ಯೋಗ ರಹಿತರಾಗಿದ್ದರೆ, ಮಾಲಕರು ವಾಹನಗಳ ಕಂತು ಕಟ್ಟದೆ ಒದ್ದಾಡುವಂತಾಗಿದೆ. ಕಟ್ಟಡ ನಿರ್ಮಾಣ ಕಾರ್ಯವನ್ನೇ ಅವಲಂಬಿಸಿರುವ ಸಾವಿರಾರು ಜನ ನಿರ್ಮಾಣ ಕಾರ್ಮಿಕರು ಕೆಲಸವಿಲ್ಲದೆ ಅಲೆದಾಡುವಂತೆ ಆಗಿದೆ. ಜಿಲ್ಲೆಯ ಜನತೆ ಸಮಸ್ಯೆಯಿಂದ ಬಳಲುತ್ತಿದ್ದರೆ ಉಸ್ತುವಾರಿ ಸಚಿವರು ಎನಿಸಿಕೊಂಡವರು ಈ ಕುರಿತು ಕಿಂಚಿತ್ತು ತಲೆಕೆಡಿಸಿಕೊಂಡಿಲ್ಲ.

. . . . . . .

ಭಾರತೀಯ ಜನತಾ ಪಾರ್ಟಿಯು ಜನರ ಈ ಸಮಸ್ಯೆಯ ಕುರಿತು ಹಲವು ವೇದಿಕೆಗಳಲ್ಲಿ ಧನಿಯೆತ್ತಿದ್ದರೂ ಸರಕಾರದ ಕಿವಿಗೆ ಕೇಳಿಸುತ್ತಿಲ್ಲ. ಹಾಗಾಗಿ ಜಿಲ್ಲೆಯ ಜನ ಬೀದಿಗೆಳಿಯುವುದು ಅನಿವಾರ್ಯವಾಗಿದ್ದು ಜುಲೈ 14ರ ಸೋಮವಾರ ಜಿಲ್ಲೆಯಾದ್ಯಂತ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಯಲಿದೆ. ಸುಳ್ಯ ವಿಧಾನಸಭಾ ಕ್ಷೇತ್ರದ ಕಡಬ ಮತ್ತು ಸುಳ್ಯ 2 ತಾಲೂಕು ಕೇಂದ್ರಗಳ ಲ್ಲಿ
ಪೂರ್ವಾಹ್ನ 9:30ಕ್ಕೆ ಪ್ರತಿಭಟನೆ ನಡೆಯಲಿದ್ದು, ಎಲ್ಲಾ ಲಾರಿ ಚಾಲಕ ಮಾಲಕರು, ಎಲ್ಲಾ ಕಟ್ಟಡ ನಿರ್ಮಾಣ ಕಾರ್ಮಿಕರು, ಕಾರ್ಮಿಕ ಸಂಘಟನೆಗಳವರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಪ್ರತಿಭಟನೆಯಲ್ಲಿ ಭಾಗವಹಿಸಬೇಕಾಗಿ ಸುಳ್ಯ ಮಂಡಲ ಅಧ್ಯಕ್ಷ ಶ್ರೀ ವೆಂಕಟ್ ವಳಲಂಬೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading