Ad Widget

ಸುಳ್ಯ : “ಸ್ವರ್ಣಂ ಜ್ಯುವೆಲ್ಸ್” ಉದ್ಘಾಟನೆ

ಶುಭಾರಂಭದ ಪ್ರಯುಕ್ತ ವಿಶೇಷ ಕೊಡುಗೆ ಲಭ್ಯ

ಸುಳ್ಯದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಎದುರಿನ ಸೂಂತೋಡು ಎಂಪೋರಿಯಂ ನಲ್ಲಿ ನೂತನ ಚಿನ್ನಾಭರಣಗಳ ಮಳಿಗೆ “ಸ್ವರ್ಣಂ ಜ್ಯುವೆಲ್ಸ್” ಜು.07 ರಂದು ಶುಭಾರಂಭಗೊಂಡಿತು.
ಮುಳಿಯ ಗೋಲ್ಡ್ & ಡೈಮಂಡ್ಸ್‌ ನ ಮಾಲೀಕರಾದ ಕೇಶವ ಪ್ರಸಾದ್ ಮುಳಿಯ ಹಾಗೂ ಕೃಷ್ಣನಾರಾಯಣ ಮುಳಿಯ ಅವರು ಮಳಿಗೆಯನ್ನು ಉದ್ಘಾಟಿಸಿದರು. ಸುಳ್ಯದ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್‌ ನ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ ಅವರು ಡೈಮಂಡ್ ಕೌಂಟರ್  ಉದ್ಘಾಟಿಸಿದರು. ಸೂಂತೋಡು ಎಂಪೋರಿಯಂ ಮಾಲಕ ಸೂರಯ್ಯ ಗೌಡ ಅವರು ಚಿನ್ನಾಭರಣ ಕೌಂಟರ್ ಉದ್ಘಾಟಿಸಿದರು. ಕೃಷ್ಣವೇಣಿ ಮುಳಿಯ, ಅಶ್ವಿನಿ ಕೃಷ್ಣ ಮುಳಿಯ, ಶ್ರಮಿಕಾ ಸೂಂತೋಡು ಅವರು ಸ್ವರ್ಣಂ ಸ್ಪೆಷಲ್‌ ಆಭರಣಗಳನ್ನು ಬಿಡುಗಡೆ ಮಾಡಿದರು.
ಮುಖ್ಯ ಅತಿಥಿಗಳಾಗಿ ಪದ್ಮಶ್ರೀ ಪುರಸ್ಕೃತರಾದ ಗಿರೀಶ್ ಭಾರದ್ವಾಜ್, ಸುಳ್ಯದ ವಾಣೀಜ್ಯೋದ್ಯಮಿಗಳ ಸಂಘದ ಅಧ್ಯಕ್ಷರಾದ ಪಿ.ಬಿ.ಸುಧಾಕರ ರೈ, ನಗರ ಪಂಚಾಯತ್ ಸದಸ್ಯರಾದ ಎಂ.ವೆಂಕಪ್ಪ ಗೌಡ, ಡಾ.ರೇವಂತ್ ಅತಿಥಿಗಳಾಗಿದ್ದರು.
ಸಂಸ್ಥೆಯ ಪಾಲುದಾರರಾದ ಪ್ರವೀಣ್.ಬಿ ಗೌಡ, ಸಂಜೀವ.ಕೆ, ಭವಿತ್.ಯು ಹಾಗೂ ಲೋಕೇಶ್ ಎಂ.ಎಸ್ ಉಪಸ್ಥಿತರಿದ್ದರು.
ಪಾಲುದಾರರಾದ ಸಂಜೀವ.ಕೆ ಸ್ವಾಗತಿಸಿ, ಪ್ರವೀಣ್.ಬಿ ಗೌಡ ವಂದಿಸಿದರು. ಪ್ರಜ್ಞಾ ಓಡಿಲ್ನಾಳ ಕಾರ್ಯಕ್ರಮ ನಿರೂಪಿಸಿದರು.

ಗ್ರಾಹಕರ ಸೇವೆಯಲ್ಲಿ ಚಿನ್ನೋದ್ಯಮದಲ್ಲಿ 20 ವರ್ಷಕ್ಕೂ ಹೆಚ್ಚು ವರ್ಷಗಳ ಅನುಭವ ಹೊಂದಿರುವವರ ಪಾಲುದಾರಿಕೆಯೊಂದಿಗೆ ಕಾರ್ಯಾರಂಭ ಮಾಡಿರುವ ಸ್ವರ್ಣಂ ಜ್ಯುವೆಲ್ಸ್‌ನಲ್ಲಿ ಉದ್ಘಾಟನೆ ಪ್ರಯುಕ್ತ ವಿಶೇಷ ಆಫರ್ ಕೊಡುಗೆಗಳನ್ನು ಘೋಷಿಸಲಾಗಿದೆ.

ಸ್ವರ್ಣಂ ವಿಶೇಷತೆ : ನಗುಮೊಗದ ಸರ್ವಿಸ್, ಆರ್ಡರ್ ಸ್ಪೆಷಲಿಸ್ಟ್, ಗೋಲ್ಡ್ ಟೆಸ್ಟ್ ಮೆಶಿನ್, ಉಚಿತ ಆಭರಣ ಸರ್ವಿಸ್, ಡೋರ್ ಡೆಲಿವರಿ ಹಾಗೂ ತುರ್ತು ಸಮಯದಲ್ಲಿ ಗ್ರಾಹಕರ ಮನಸ್ಸಿಗೊಪ್ಪುವ ಚಿನ್ನಾಭರಣಗಳನ್ನು ವಿಶೇಷವಾದ ವಿನ್ಯಾಸಗಳೊಂದಿಗೆ ತಯಾರಿಸಿಕೊಡಲಾಗುತ್ತದೆ ಎಂದು ಮಾಲಕರು ತಿಳಿಸಿದ್ದಾರೆ.

12,000 ರೂ.ಗೆ ಚಿನ್ನದ ನೆಕ್ಲೇಸ್‌ ಲಭ್ಯ : ಮಹಿಳೆಯರಿಗೆ ಮನಕ್ಕೆ ಇಚ್ಚಿಸುವಂತಹ ನೂತನ ಶೈಲಿಯ 15 ಕ್ಕೂ ಹೆಚ್ಚು ಕಲರ್ ಮ್ಯಾಚಿಂಗ್ ಚಿನ್ನದ ನೆಕ್ಲೆಸ್ ಗಳು ಇದೀಗ ಸ್ವರ್ಣಂ ಜ್ಯುವೆಲ್ಸ್‌ನಲ್ಲಿ ಲಭ್ಯವಿದೆ.12,000 ರೂ.ಒಳಗೆ ಖರೀದಿಸಬಹುದು. ಪ್ರತೀ ಖರೀದಿಗೂ ವಿಶೇಷ ಉಡುಗೊರೆ ಲಭ್ಯವಿದೆ. ಚಿನ್ನ, ಬೆಳ್ಳಿ, ವಜ್ರ ಖರೀದಿಗೆ ಗ್ರಾಹಕರಿಗೆ ವಿಶೇಷ ಉಡುಗೊರೆ ನೀಡಲಾಗುವುದು. ಗ್ರಾಹಕರು ನೂತನ ಮಳಿಗೆಗೆ ಭೇಟಿ ನೀಡಿ ವ್ಯಾಪಕ ಶ್ರೇಣಿಯ ಆಭರಣಗಳ ಸಂಗ್ರಹವನ್ನು ವೀಕ್ಷಿಸಬೇಕಾಗಿ ಸ್ವರ್ಣಂ ಜ್ಯುವೆಲ್ಸ್ ಆಡಳಿತ ಪಾಲುದಾರರಾದ ಪ್ರವೀಣ್ ಗೌಡ.ಬಿ, ಸಂಜೀವ.ಕೆ, ಭವಿತ್.ಯು ಹಾಗೂ ಲೋಕೇಶ್.ಎಂ.ಎಸ್  ತಿಳಿಸಿದ್ದಾರೆ. ಬುಕ್ಕಿಂಗ್‌ ಹಾಗೂ ವಿಶೇಷ ವಾಹನ ಪಾರ್ಕಿಂಗ್‌ ಗೆ 7975425067 ಕರೆ ಮಾಡಬಹುದು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading