Ad Widget

ಗುತ್ತಿಗಾರು :  ಹಣದಾಸೆಗೆ ಹೂಡಿಕೆ ಮಾಡಿದ ಮಹಿಳೆಗೆ ಲಕ್ಷಾಂತರ ರೂಪಾಯಿ ವಂಚನೆ

ಹಣ ಠೇವಣಿ ಮಾಡಿದರೆ ಕಮಿಷನ್ ನೀಡುವುದಾಗಿ ನಂಬಿಸಿ ಸುಳ್ಯ ತಾಲೂಕಿನ ಗುತ್ತಿಗಾರಿನ 30 ವರ್ಷದ ಮಹಿಳೆಯಿಂದ ಲಕ್ಷಾಂತರ ರೂ ಪಡೆದುಕೊಂಡು ವಂಚಿಸಿದ ಬಗ್ಗೆ  ವರದಿಯಾಗಿದೆ.
ಮಾರ್ಚ್ 19ರಂದು ಮಹಿಳೆಗೆ ಟೆಲಿಗ್ರಾಂ ಆ್ಯಪ್‌ನಿಂದ ಏರ್‌ಫಝ್ ಎಂಬ ಕಂಪೆನಿಯಲ್ಲಿ ಹೂಡಿಕೆ ಮಾಡಿದರೆ ಕಮಿಷನ್ ನೀಡುವುದಾಗಿ ತಿಳಿಸಿ ಲಿಂಕ್ ಕಳುಹಿಸಲಾಗಿತ್ತು. ಆ ಲಿಂಕನ್ನು ಒತ್ತಿದಾಗ ಅದರಲ್ಲಿ ಟೆಲಿಗ್ರಾಂ ಅಕೌಂಟ್ ತೆರೆದು ಲಾಗಿನ್ ಆಗುವಂತೆ ತಿಳಿಸಲಾಗಿತ್ತು. ಅದರಂತೆ ಮಹಿಳೆ ತನ್ನ ಹೆಸರಿನಲ್ಲಿ ಖಾತೆ ತೆರೆದರು. ಅನಂತರ ಏರ್‌ಫಝ್ ಕಸ್ಟಮ‌ರ್ ಕೇರ್ ಟೆಲಿಗ್ರಾಂ ಖಾತೆಯಿಂದ ಹಣ ಠೇವಣಿ ಮಾಡಿದರೆ ಕಮಿಷನ್ ಸಿಗುವುದಾಗಿ ತಿಳಿಸಿತು.
ಅದರಂತೆ ಮಹಿಳೆ 11,500 ರೂ. ಠೇವಣಿ ಮಾಡಿದರು. ಅದಕ್ಕೆ ಕಮಿಷನ್ ಆಗಿ 21,109 ರೂ. ಮಹಿಳೆಯ ಬ್ಯಾಂಕ್‌ ಖಾತೆಗೆ ಬಂದಿರುತ್ತದೆ. ಅನಂತರ ಇನ್ನು ಹೆಚ್ಚಿನ ಮೊತ್ತವನ್ನು ಠೇವಣಿ ಮಾಡುವಂತೆ ತಿಳಿಸಲಾಯಿತು. ಅದರಂತೆ ಮಹಿಳೆ ಹಂತ ಹಂತವಾಗಿ ಅಪರಿಚಿತ ವ್ಯಕ್ತಿಗಳು ತಿಳಿಸಿದ ಬ್ಯಾಂಕ್‌ ಖಾತೆಗಳಿಗೆ ಒಟ್ಟು 11,21,863 ರೂ.ಗಳನ್ನು ಕಳುಹಿಸಿದರು. ಆದರೇ ಕೊನೆಗೆ ಹಣವನ್ನು ಪಡೆದು ಯಾವುದೇ ಕಮಿಷನ್ ನೀಡದೆ ಮೋಸ ಮಾಡಲಾಗಿದೆ ಎಂದು ತಿಳಿದುಬಂದಿದೆ.

. . . . . . . . .

ಘಟನೆಯ ಬಗ್ಗೆ ಮಹಿಳೆಯ ಪತಿಯ ಜತೆ ವಿಚಾರಿಸಿದಾಗ ಈ ಹಣ ಹೂಡಿಕೆ ಮಾಡಿರುವ ಬಗ್ಗೆ ನನಗೆ ಪತ್ನಿ ಯಾವುದೇ ಮಾಹಿತಿ ನೀಡಿರುವುದಿಲ್ಲ. ಅವಳ ಹಾಗೂ ಮನೆಯವರ ಚಿನ್ನವನ್ನು ನಮಗೆ ತಿಳಿಯದಂತೆ ಅಡವಿರಿಸಿದ್ದು, ನಾವು ಚಿನ್ನ ಹುಡುಕುವಾಗ ಈ ವಿಷಯ ಬಹಿರಂಗವಾಗಿದೆ. ಇದರಿಂದ ನಮಗೆ ವಂಚನೆಯಾಗಿದೆ.‌ ತನ್ನ ತಾಯಿಯ ಖಾತೆಯಿಂದ 60 ಸಾವಿರ ಹಣ ಕೂಡ ತೆಗೆದಿದ್ದಾಳೆ.‌ ಬಳಿಕ ಆಕೆಯ ತಾಯಿ ಮನೆಯವರ ಜತೆ ಮಾತುಕತೆ ನಡೆದು ಸುಳ್ಯದ ಖಾಸಗಿ ಸಂಸ್ಥೆಗೆ ಉದ್ಯೋಗಕ್ಕೆ ಕಳಿಸಲಾಗಿತ್ತು. ಅಲ್ಲಿಯೂ ಬುದ್ದಿ ಬಿಡದ ಆಕೆ ತನ್ನ ಸಂಬಳದ ಹಣ ಹಾಗೂ ಸಹೋದ್ಯೋಗಿಗಳ ಜತೆ ಸಾಲ ಮಾಡಿ ಹೂಡಿಕೆ ಮಾಡಿದ್ದಾಳೆ. ಪತ್ನಿಯಿಂದ ನಮಗೆ ಲಕ್ಷಗಟ್ಟಲೇ ಹಣ ವಂಚನೆಯಾಗಿದೆ ಎಂದಿದ್ದಾರೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading