Ad Widget

ಮಹಿಳೆಗೆ ಹಲ್ಲೆ ಆರೋಪಿಯನ್ನು ಬಂಧಿಸುವಂತೆ ಸಂಘಟನೆಯವರಿಂದ ವೃತ್ತ ನಿರೀಕ್ಷರಿಗೆ ಮನವಿ: ಮಾ.30 ರ ಒಳಗೆ ಬಂಧಿಸದಿದ್ದರೇ ಠಾಣೆಯ ಎದುರು ಪ್ರತಿಭಟನೆಯ ಎಚ್ಚರಿಕೆ

ಸುಳ್ಯದ ನಾವೂರಿನ ಶ್ರೀಮತಿ ಚಂದ್ರಿಕಾ ಎಂಬ ಮಹಿಳೆಯ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಆರೋಪಿಯಾಗಿರುವ ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ ಯವರ ಮೇಲೆ ಮಾ.26 ರಂದು ಎಫ್.ಐ.ಆರ್ ದಾಖಲಾಗಿದ್ದು ಈ ತನಕ ಬಂಧಿಸದೇ ಇರುವುದನ್ನು ಖಂಡಿಸಿ ಶೀಘ್ರವಾಗಿ ಆತನನ್ನು ಬಂಧಿಸುವಂತೆ ಆಗ್ರಹಿಸಿ ಹಿಂದೂ ಪರ ಸಂಘಟನೆಯವರು ಸುಳ್ಯದ ವೃತ್ತ ನಿರೀಕ್ಷರಿಗೆ ಮನವಿ ಸಲ್ಲಿಸಿದರು.

. . . . . . . . .

ಮಾ.30 ರ ಒಳಗಾಗಿ ಆರೋಪಿ ಶರೀಫ್ ಕಂಠಿಯವರನ್ನು ಬಂಧಿಸಬೇಕು ಇಲ್ಲವಾದಲ್ಲಿ ಮಾ.31 ರಂದು ಪೊಲೀಸ್ ಠಾಣೆಯ ಎದುರುಗಡೆ ಎಲ್ಲಾ ಪರಿವಾರ ಸಂಘಟನೆಯವರು ಸೇರಿ ಪ್ರತಿಭಟನೆ ನಡೆಸಲಿದ್ದೇವೆ. ಶೀಘ್ರವಾಗಿ ಇಲಾಖೆ ಕಾರ್ಯನ್ಮೋಖರಾಗಿ ಆರೋಪಿಯನ್ನು ಬಂಧಿಸಬೇಕೆಂದು ಒತ್ತಾಯಿಸಿ ಮನವಿ ಪತ್ರವನ್ನು ಸರ್ಕಲ್ ಇನ್ಸ್ ಪೆಕ್ಟರ್ ತಿಮ್ಮಪ್ಪ ನಾಯ್ಕ್ ರವರಿಗೆ ಸಲ್ಲಿಸಿದರು.

. . . . . . .

ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷದ್ ಬಜರಂಗದಳ ,ಮಾತೃಶಕ್ತಿ ದುರ್ಗಾವಾಹಿನಿ ಸುಳ್ಯ ಪ್ರಖಂಡದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ಮಹಿಳೆಯರು ಸೇರಿದಂತೆ ಸುಮಾರು50 ಕ್ಕೂ ಮಿಕ್ಕಿ ಕಾರ್ಯಕರ್ತರು ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading