Ad Widget

ಕುಲ್ಕುಂದ ಬಸವೇಶ್ವರ ದೇವಳಕ್ಕೆ ವಾಟರ್ ಫಿಲ್ಟರ್ ಹಾಗೂ ಕಾಣಿಕೆ ಹುಂಡಿ ಕೊಡುಗೆ

ಸುಬ್ರಹ್ಮಣ್ಯ ಮಾ 27: 800 ವರ್ಷಗಳ ಇತಿಹಾಸವನ್ನು ಹೊಂದಿರುವ ಪುರಾಣ ಪ್ರಸಿದ್ಧ ದೇವಸ್ಥಾನ, ಬಸವನ ಹಣೆಯ ಮೇಲೆ ಈಶ್ವರ ಲಿಂಗ ಇರುವಂತಹ ಏಕೈಕ ದೇವಸ್ಥಾನ, ಸುಬ್ರಹ್ಮಣ್ಯ ಸಮೀಪದ ಕುಲ್ಕುಂದ ಬಸವೇಶ್ವರ ದೇವಸ್ಥಾನಕ್ಕೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಮಂಗಳೂರು ಪ್ರಾದೇಶಿಕ ಹಾಗೂ ವಲಯ ಕಛೇರಿ ವತಿಯಿಂದ ದೂರದೂರುಗಳಲ್ಲಿ ಇರುವ ಭಕ್ತಾದಿಗಳಿಗೆ ಕಾಣಿಕೆಯನ್ನ ಸಲ್ಲಿಸಲು ಅನುಕೂಲವಾಗುವಂತೆ ಸ್ಕ್ಯಾನರ್ ಕೊಡ್ ಗಳನ್ನ ಬಳಸಿ ಕಾಣಿಕೆಯನ್ನು ಸಲ್ಲಿಸುವ ಕಾಣಿಕೆಹುಂಡಿಯನ್ನು ಹಾಗೂ ಇಲ್ಲಿ ಬರುವ ಭಕ್ತಾದಿಗಳಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಸಲುವಾಗಿ ಅಕ್ವಾಗಾರ್ಡ್ ವಾಟರ್ ಫಿಲ್ಟರ್ ಗಳನ್ನು ಉಚಿತವಾಗಿ ಮಂಗಳವಾರ ದೇವಳಕ್ಕೆ ಹಸ್ತಾಂತರಿಸಲಾಯಿತು.
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ವಲಯ ಕಚೇರಿಯ ಜನರಲ್ ಮ್ಯಾನೇಜರ್ ರೇಣು ನಾಯರ್ ಬಸವೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರಾದ ಗಿರಿಧರ ಸ್ಕಂದ ಅವರಿಗೆ ಕೀಯನ್ನು ಹಸ್ತಾಂತರಿಸುವುದರ ಮೂಲಕ ಉದ್ಘಾಟನೆಯನ್ನು ನೆರೆವೇರಿಸಿದರು.
ಈ ಸಂದರ್ಭದಲ್ಲಿ ವಲಯ ಕಚೇರಿಯ ಡೇಫ್ಯೂಟಿ ಜನರಲ್ ಮ್ಯಾನೇಜರ್ ರಾಜ್ ಮಣಿ, ಸಾರ್ವಜನಿಕ ಸಂಪರ್ಕ ಅಧಿಕಾರಿ ಪುರಂದರ, ವಲಯ ಕಚೇರಿಯ ಲಿಖಿತ್, ಸುಬ್ರಹ್ಮಣ್ಯ ಯೂನಿಯನ್ ಬ್ಯಾಂಕ್ ಮ್ಯಾನೇಜರ್ ಸುರೇಶ್ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ನಿವೃತ್ತ ಉಪನ್ಯಾಸಕ ಹಾಗೂ ರೋಟರಿ ವಲಯ ಲೆಫ್ಟಿನೆಂಟ್ ವಿಶ್ವನಾಥ ನಡುತೋಟ ಎಲ್ಲರನ್ನು ಸ್ವಾಗತಿಸಿದರು. ದೇವಳದ ಆಡಳಿತ ಮಂಡಳಿ ಅಧ್ಯಕ್ಷರಾದ ಗಿರಿಧರ ಸ್ಕಂದ ಪ್ರಾಸ್ತಾವಿಕ ನುಡಿಯೊಂದಿಗೆ ದೇವಸ್ಥಾನದ ವಿವರಣೆಯನ್ನು ನೀಡಿದರು.
ದೇವಳದ ಮುಖ್ಯ ಅರ್ಚಕರಾದ ಗಣೇಶ್ ದೀಕ್ಷಿತ್, ಆಡಳಿತ ಮಂಡಳಿ ಕಾರ್ಯದರ್ಶಿ ಚಂದ್ರಶೇಖರ ಬಸವನ ಮೂಲೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

. . . . . . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!