
ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ಕ್ಷೇತ್ರದ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ಮೂಡಪ್ಪ ಸೇವೆಯಆಮಂತ್ರಣ ಪತ್ರಿಕೆಯನ್ನು ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ನೀಡಲಾಯಿತು.ಶ್ರೀ ದೇವಳದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಅವರಿಗೆ ಬ್ರಹ್ಮಕಲಶೋತ್ಸವ ಸಮಿತಿ ಪದಾಧಿಕಾರಿಗಳು ಶ್ರೀ ದೇವಳಕ್ಕೆ ಆಗಮಿಸಿ ನೀಡುವ ಮೂಲಕ ವಿರಾಟ್ ದೇವತಾ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದರು.ಬಳಿಕ ಶ್ರೀ ದೇವಳದಿಂದ ಬೋಜನ ಸಾಮಾಗ್ರಿ ಸೇರಿದಂತೆ ಹಸಿರು ಕಾಣಿಕೆಯನ್ನು ಶ್ರೀ ದೇವಳದಿಂದ ಮಧೂರು ದೇವಳಕ್ಕೆ ಹಸ್ತಾಂತರಿಸಲಾಯಿತು.ಮಧೂರು ಕ್ಷೇತ್ರದಲ್ಲಿ ಕಳೆದ ಹಲವಾರು ವರ್ಷಗಳಿಂದ ಕುಕ್ಕೆ ದೇವಳದಿಂದ ನಡೆಸುವ ವಸತಿ ಛತ್ರವಿದೆ. ಇದರಿಂದ ಕ್ಷೇತ್ರಕ್ಕೆ ಬರುವ ಭಕ್ತರಿಗೆ ಹೆಚ್ಚು ಅನುಕೂಲತೆ ಒದಗಿದೆ. ಈ ಸಂದರ್ಭ ಶ್ರೀ ದೇವಳದ ಅಭಿಯಂತರ ಉದಯ ಕುಮಾರ್, ಶ್ರೀ ದೇವಳದ ಕೆ.ಎಂ.ಗೋಪಿನಾಥ್ ನಂಬೀಶ, ಸರಸ್ವತಿ ಉಪಸ್ಥಿತರಿದ್ದರು.
