
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ನೂತನವಾಗಿ ರಚಿಸಲ್ಪಟ್ಟ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ಸದಸ್ಯರಾಗಿ ಮಹೇಶ್ ಬೆಳ್ಳಾರ್ಕರ್ ಇವರು ನಾಮನಿರ್ದೇಶನಗೊಂಡಿರುತ್ತಾರೆ.
ದ. ಕ. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಜಿಲ್ಲಾ ಮಟ್ಟದ ಈ ಸಮಿತಿಯಲ್ಲಿ ಜಿಲ್ಲೆಯ ಒಟ್ಟು ಐವರು ಸದಸ್ಯರುಗಳಿದ್ದಾರೆ. ಈ ನಿಗಮದ ಮೂಲಕ ಕರ್ನಾಟಕ ಸರಕಾರವು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಲೆಮಾರಿ, ಅರೆ ಅಲೆಮಾರಿ, ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಸಮುದಾಯದಡಿಯಲ್ಲಿ ಬರುವ ಜಾತಿಗಳ ಸ್ವಾವಲಂಬನೆ ಹಾಗೂ ಏಳಿಗೆಗಾಗಿ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ.
ಮಾಜಿ ಶಾಸಕ ಕುಶಲರ ಪುತ್ರರಾದ ಮಹೇಶ್ ಬೆಳ್ಳಾರ್ಕರ್ ರವರು ಸುಳ್ಯ ಬ್ಲಾಕ್ ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷರಾಗಿದ್ದಾರೆ.
