
ಏಪ್ರಿಲ್ 26 ಶನಿವಾರ ಹಾಗೂ ಏಪ್ರಿಲ್ 27 ಆದಿತ್ಯವಾರದಂದು ಗೌಡ ಸಮುದಾಯದವರ 10 ತಂಡಗಳ ಲೀಗ್ ಮಾದರಿಯ ಗೌಡ ಪ್ರೀಮಿಯರ್ ಲೀಗ್ -2025 ಓವರ್ ಆರ್ಮ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟ ಸಂಪಾಜೆ ಸಂಯುಕ್ತ ಪದವಿಪೂರ್ವ ಕಾಲೇಜು ಮೈದಾನದಲ್ಲಿ ನಡೆಯಲಿದೆ. ಪಂದ್ಯಾಟದ ಪ್ರಥಮ ಬಹುಮಾನ 50000 ನಗದು ಹಾಗೂ ಟ್ರೋಫಿ, ದ್ವಿತೀಯ ಬಹುಮಾನ 30000 ನಗದು ಮತ್ತು ಟ್ರೋಫಿ, ತ್ರತೀಯ ಹಾಗೂ ಚತುರ್ಥ ಬಹುಮಾನ ಪಡೆಯುವ ತಂಡಕ್ಕೆ 5000 ನಗದು ಹಾಗೂ ಟ್ರೋಫಿ ಹಾಗೂ ಇನ್ನಿತರ ವೈಯುಕ್ತಿಕ ಬಹುಮಾನ ನೀಡಲಾಗುವುದು..ಹಾಗೂ ಈ ಪಂದ್ಯಾಟ ನೇರಪ್ರಸಾರ ಇರಲಿದೆ..ಹಾಗೂ ಸರ್ವರಿಗೂ 2 ದಿನ ಉಚಿತ ಭೋಜನದ ವ್ಯವಸ್ಥೆ ಇರಲಿದೆ. ಈ ಗೌಡ ಪ್ರೀಮಿಯರ್ ಲೀಗ್ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟದಲ್ಲಿ ದಕ್ಷಿಣಕನ್ನಡ, ಕೊಡಗು, ಕಾಸರಗೋಡು ಜಿಲ್ಲೆಯ ಆಟಗಾರರು ಭಾಗವಹಿಸಲಿದ್ದಾರೆ ಎಂದ ಸಂಘಟಕರು ತಿಳಿಸಿದ್ದಾರೆ
