
ಸುಬ್ರಹ್ಮಣ್ಯ ಮಾ.9: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ರಿಜಿಸ್ಟರ್ಡ್ ಕರ್ನಾಟಕ ತುಮಕೂರು ನೇತ್ರಾವತಿ ವಲಯ ಮಂಗಳೂರು ನಗರ ಇವರ ಸಹಯೋಗದಲ್ಲಿ ಆರೋಗ್ಯ ಪೂರ್ಣ ಜೀವನಕ್ಕಾಗಿ 48 ದಿನಗಳ ಉಚಿತ ಯೋಗ ಶಿಕ್ಷಣ ತರಗತಿ ಇಂದು ಆದಿತ್ಯವಾರ ಸುಬ್ರಹ್ಮಣ್ಯದ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಉದ್ಘಾಟನೆಯೊಂದಿಗೆ ಆರಂಭವಾಯಿತು.
ತರಬೇತಿಯ ಉದ್ಘಾಟನೆಯನ್ನು ನೆರವೇರಿಸಿದ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಜಿಲ್ಲಾ ಸಹ ಸಂಚಾಲಕರಾದ ಲೋಕೇಶ್ ಅವರು ಮಾತನಾಡುತ್ತಾ ಯೋಗ ಅಂದರೆ ಕೇವಲ ಆಸನ ಮಾತ್ರ ಅಲ್ಲ .ಅದು ವ್ಯಕ್ತಿಯ ಜೀವನದ ಪದ್ಧತಿಯನ್ನು ರೂಪಿಸುವಂತಾಗಿದೆ. ಅಲ್ಲದೆ ಒಬ್ಬ ಮನುಷ್ಯ ತನ್ನ ಜೀವನದಲ್ಲಿ ಹೇಗಿರಬೇಕು ಎಂಬುದನ್ನು ಕಲಿಯುವಂತಹ ತರಬೇತಿಯನ್ನು ನೀಡಲಾಗುತ್ತಿದೆ. ಸಂಸ್ಕಾರ, ಸಂಘಟನೆ ,ಸೇವೆ ಎಂಬ ಧ್ಯೇಯೋದ್ದೇಶದೊಂದಿಗೆ ಇಂದು ಪ್ರಪಂಚದಾದ್ಯಂತ ಲಕ್ಷಾಂತರ ಜನ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಉಚಿತವಾಗಿ ತರಬೇತಿಯನ್ನು ಪಡೆಯುತ್ತಿದ್ದಾರೆ ಎಂದು ಅವರು ನುಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಬ್ರಹ್ಮಣ್ಯ ಶಾಖ ಹಿರಿಯ ಯೋಗ ಬಂದು ಸುಬ್ರಹ್ಮಣ್ಯ ಅತ್ಯಡಿ ಅವರು ವಹಿಸಿದ್ದು ಯೋಗದ ಅವಶ್ಯಕತೆಗಳ ಬಗ್ಗೆ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಜಾತ ಕಲಾಜೆ ಉಪಸ್ಥಿತರಿದ್ದು ಶುಭ ಹಾರೈಸಿದರು. ಯೋಗ ಅಭ್ಯಾಸದಿಂದ ಆದ ಅನುಭವಗಳನ್ನು ಜಯಶ್ರೀ ಹಾಗೂ ಹೇಮಾವತಿ ಅನಿಸಿಕೆ ವ್ಯಕ್ತಪಡಿಸಿದರು ಸುಬ್ರಹ್ಮಣ್ಯ ಶಾಖ ಸಂಚಾಲಕ ಪ್ರಭಾಕರ್ ಅವರು ಸಾಮೂಹಿಕ ಹಾಗೂ ವೈಯಕ್ತಿಕ ಪ್ರಾರ್ಥನೆ ನಡೆಸಿಕೊಟ್ಟರು. ವೆಂಕಟೇಶ್ ಅವರು ಭಜನೆ ಕಾರ್ಯಕ್ರಮವನ್ನು ನಡೆಸಿರುವರು. 40ಕ್ಕೂ ಮಿಕ್ಕಿ ಯೋಗ ಬಂಧುಗಳು ಹಾಜರಿದ್ದರು. ಸುಬ್ರಹ್ಮಣ್ಯ ಶಾಖೆಯ ಯೋಗ ಬಂದು ಚಂದ್ರಶೇಖರ್ ಸ್ವಾಗತಿಸಿದರು . ಸುಬ್ರಹ್ಮಣ್ಯ ಶಾಖೆಯ ಯೋಗ ಬಂಧುಗಳಾದ ಮೋನಪ್ಪ ದೋಣಿಮಕ್ಕಿ, ಬಾಲಕೃಷ್ಣ ನೂಚೀಲ, ನಾಗರಾಜ ,ಯಶೋದರ ಮಾಣಿ ಬೈಲು, ಲೀಲಾ ನಡುತೋಟ ,ಜಾನಕಿ ವೆಂಕಟೇಶ್, ರಾಜೇಶ್ವರಿ, ಅಶ್ವಿಜ ನಡುತೋಟ ಮುಂತಾದವರು ಸಹಕರಿಸಿದರು. ಯೋಗ ಬಂದು ವಿಶ್ವನಾಥ ನಡುತೋಟ ನಿರೂಪಿಸಿದ ಕಾರ್ಯಕ್ರಮದ ಕೊನೆಯಲ್ಲಿ ಜಯಲಕ್ಷ್ಮಿ ಧನ್ಯವಾದ ಸಮರ್ಪಿಸಿದರು.
