Ad Widget

ಕೆ.ಎಸ್.ಎಸ್. ಕಾಲೇಜಿನ ಸಮಾಜಶಾಸ್ತ್ರ ವಿಭಾಗದಿಂದ ಏನೆಕಲ್ಲಿನಲ್ಲಿ ಆಟದಿಂದ ಪಾಠ ಎಂಬ ವಿಸ್ತರಣಾ ಕಾರ್ಯಕ್ರಮ


ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ , ಆಂತರಿಕ ಗುಣಮಟ್ಟ ಭರವಸಾ ಕೋಶ ಸಮಾಜಶಾಸ್ತ್ರ ವಿಭಾಗದ ಆಶ್ರಯದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಎನೆಕಲ್ಲು ಇಲ್ಲಿ ಆಟದಿಂದ ಪಾಠ ಎಂಬ ವಿಸ್ತರಣಾ ಕಾರ್ಯಕ್ರಮವನ್ನು  ಮಾ.8ರಂದು ಹಮ್ಮಿಕೊಳ್ಳಲಾಯಿತು. ಸಮಾಜಶಾಸ್ತ್ರ ವಿಭಾಗದ ತೃತೀಯ ಪದವಿಯ ವಿದ್ಯಾರ್ಥಿಗಳು, ಶಾಲಾ ಮಕ್ಕಳಿಗೆ ವಿವಿಧ ರೀತಿಯ ಆಟಗಳನ್ನು ಹಮ್ಮಿಕೊಂಡು ಆ ಮೂಲಕ ಪಾಠವನ್ನು ಕಲಿಸಿದರು. ವಿದ್ಯಾರ್ಥಿಗಳಲ್ಲಿ ಏಕಾಗ್ರತೆ, ಸಮಯ ಪರಿಪಾಲನೆ, ಕೌಶಲ್ಯವನ್ನು ಹೆಚ್ಚಿಸುವ ಆಟಗಳನ್ನು ಹಮ್ಮಿಕೊಂಡರು. ಕಾರ್ಯಕ್ರಮದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯನಿ, ಶ್ರೀಮತಿ ಚಂದ್ರಿಕಾ, ಶಾಲೆಯ ಅಧ್ಯಾಪಕವೃಂದ, ಮಹಾವಿದ್ಯಾಲಯದ ಹಿರಿಯ ವಿದ್ಯಾರ್ಥಿ ಶ್ರೀ ಭರತ್, ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಮನೋಹರ, ಉಪನ್ಯಾಸಕಿ ಆರತಿ, ಸಮಾಜಶಾಸ್ತ್ರ ವಿಭಾಗದ ಒಟ್ಟು 24 ಮಕ್ಕಳು ಭಾಗವಹಿಸಿದರು. ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನವನ್ನು ನೀಡಿ ಪ್ರೋತ್ಸಾಹಿಸಲಾಯಿತು. ಸಭಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ಶ್ರೇಯಾ ಕೆ. ಕೆ . ವಂದಿಸಿ, ಸ್ವಾತಿ ಡಿ ಜಿ ಧನ್ಯವಾದ ಸಮರ್ಪಿಸಿ, ಕವನ ಕಾರ್ಯಕ್ರಮ ನಿರೂಪಿಸಿದರು.

. . . . . . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!