
ಇಂದು ಮುಂಜಾನೆ 6 ಗಂಟೆ ಸುಮಾರಿಗೆ ಸುಳ್ಯದ ಬಸ್ ನಿಲ್ದಾಣದ ಮುಂಭಾಗದಲ್ಲಿ ಗಾಂಧಿನಗರ ಕಡೆಯಿಂದ ಬರುತ್ತಿದ್ದ ಕಂಟೈನರ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ತಡೆ ಬೇಲಿ ಮುರಿದು ಒಳ ಬಂದಿದ್ದು ಸ್ಥಳದಲ್ಲೇ ಇದ್ದ ಸ್ಕೂಟಿ ಒಂದರ ಮೇಲೆ ಮಗಚಿ ಬಿದ್ದಿದೆ. ಸ್ಕೂಟಿ ಸಂಪೂರ್ಣ ನಜ್ಜುಗುಜ್ಜುಯಾಗಿದ್ದು ಸ್ಥಳೀಯ ಬ್ಯಾಂಕಿನ ಕಾಂಪೌಂಡ್ ಗೆ ಹಾನಿಯಾಗಿದೆ. ಪಕ್ಕದಲ್ಲಿ ನಂದಿನಿ ಸ್ಟಾಲ್ ಇದ್ದು ಸ್ವಲ್ಪದರಲ್ಲೇ ಹಾನಿಯಾಗುವುದು ತಪ್ಪಿದೆ.
ಮುಂಜಾನೆ ಆದ ಕಾರಣ ಬಸ್ ನಿಲ್ದಾಣದ ಬಳಿಯಲ್ಲಿ ಜನಸಂಖ್ಯೆ ವಿರಳವಾಗಿದ್ದರಿಂದ ಯಾವುದೇ ರೀತಿಯ ಪ್ರಾಣಪಾಯ ಸಂಭವಿಸಿಲ್ಲ. ಚಾಲಕನು ನಿದ್ರೆಯ ಮಂಪರು ನಲ್ಲಿದ್ದ ಎಂದು ಹೇಳಲಾಗುತ್ತಿದೆ.

