Ad Widget

ಮಾ.15 ರಂದು ಸುಳ್ಯಕ್ಕೆ ನಂದಿ ರಥ ಯಾತ್ರೆ – ಸ್ವಾಗತ ಸಮಿತಿ ಅಧ್ಯಕ್ಷರಾಗಿ ಅಕ್ಷಯ್ ಕೆ.ಸಿ. ಆಯ್ಕೆ

ಗೋಸೇವಾ ಗತಿವಿಧಿ ಕರ್ನಾಟಕ, ರಾಧಸುರಭಿ ಗೋಮಂದಿರ ರಾಷ್ಟ್ರೀಯ ಗೋಸೇವಾ ಸಂಸ್ಥಾನ ಟ್ರಸ್ಟ್‌ (ರಿ.) ನೇತೃತ್ವದಲ್ಲಿ ನಂದಿ ರಥಯಾತ್ರೆ ರಾಜ್ಯಾದ್ಯಂತ ಸಂಚರಿಸಲಿದ್ದು, ಮಾ.15 ರಂದು ಶನಿವಾರ ಸುಳ್ಯಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ಅದ್ದೂರಿಯಾಗಿ ಸ್ವಾಗತಕ್ಕಾಗಿ ಇಂದು ನಡೆದ ಪೂರ್ವಭಾವಿ ಸಭೆಯಲ್ಲಿ ಸ್ವಾಗತ ಸಮಿತಿ ರಚನೆ ಮಾಡಲಾಗಿಯಿತು.

. . . . . . . . .

ಮಾ. 05 ರಂದು ಕೇರ್ಪಳದ ದುರ್ಗಾಪರಮೇಶ್ವರಿ ಸಭಾ ಭವನದಲ್ಲಿ ನಡೆದ ಸ್ವಾಗತ ಸಮಿತಿ ರಚನೆ ಮಾಡಲಾಗಿದ್ದು ಅಧ್ಯಕ್ಷರಾಗಿ ಅಕ್ಷಯ್ ಕೆ.ಸಿ. ಕುರುಂಜಿ ಇವರನ್ನು ಆಯ್ಕೆ ಮಾಡಲಾಯಿತು. ಕಾರ್ಯಾಧ್ಯಕ್ಷರಾಗಿ ಪತಂಜಲಿ ಭಾರಧ್ವಾಜ್, ಗೌರವ ಸಲಹೆಗಾರರಾಗಿ ಮಾಜಿ ಸಚಿವರಾದ ಎಸ್ .ಅಂಗಾರ, ಶಾಸಕಿ ಭಾಗೀರಥಿ ಮುರುಳ್ಯ, ಸುಧಾಕರ ಕಾಮತ್, ಡಾ.ಕೇಶವ ಸುಳ್ಳಿ, ಡಾ. ನಿತಿನ್ ಪ್ರಭು, ಡಾ.ಪುನೀತ್ ಸೋಣಂಗೇರಿ, ಡಾ.ಸೂರ್ಯನಾರಾಯಣ, ಡಾ.ಮೇಘಶ್ರೀ ಕಳಂಜ, ಪ್ರಧಾನ ಕಾರ್ಯದರ್ಶಿಗಳಾಗಿ ಜಗದೀಶ್ ಸುಳ್ಯ, ವಿಕ್ರಂ ಅಡ್ಪಂಗಾಯ, ಕೋಶಾಧಿಕಾರಿಯಾಗಿ ಸನತ್ ಪಿ.ಆರ್., ಸಂಚಾಲಕರಾಗಿ ರಾಜೇಶ್ ಮೇನಾಲ, ಅವಿನಾಶ್ ಡಿ.ಕೆ. ಇವರನ್ನು ಆಯ್ಕೆ ಮಾಡಲಾಯಿತು.‌

ಪೂರ್ವಭಾವಿ ಸಭೆಯಲ್ಲಿ ಅರೆಸ್ಸೆಸ್ ತಾಲೂಕು ಸಂಘಚಾಲಕ್ ತಳೂರು ಚಂದ್ರಶೇಖರ,ಅರೆಸ್ಸೆಸ್ ಪ್ರಾಂತ ಸಹ ಸೇವಾ ಪ್ರಮುಖ್ ನ.ಸೀತಾರಾಮ್,ವಿಭಾಗ ಸಹ ಕಾರ್ಯವಾಹ ಸುಭಾಶ್ಚಂದ್ರ ಕಳಂಜ ರಥ ಯಾತ್ರೆಯ ಬಗ್ಗೆ ಮಾಹಿತಿ ನೀಡಿದರು. ಸಭೆಯಲ್ಲಿ ಮಾಜಿ ಸಚಿವ ಯಸ್ ಅಂಗಾರ,ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ,ಕ್ಯಾಂಪ್ಕೋ ನಿರ್ದೇಶಕ ಕೃಷ್ಣಪ್ರಸಾದ್ ಮಡ್ತಿಲ, ಬಿಜೆಪಿ ಪ್ರಮುಖರಾದ ಹರೀಶ್ ಕಂಜಿಪಿಲಿ,ಉದ್ಯಮಿ ಸುಧಾಕರ ಕಾಮತ್, ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಅಧ್ಯಕ್ಷ ಆರ್ ಕೆ ಭಟ್, ಸುಳ್ಯ ಪ್ರಾಥಮಿಕ ಕೃಷಿ ಪತ್ತಿನ ಅಧ್ಯಕ್ಷ ವಿಕ್ರಮ್ ಅಡ್ಪಂಗಾಯ,ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಶ್ರೀಕಾಂತ್ ಮಾವಿನಕಟ್ಟೆ, ಜಯಪ್ರಕಾಶ್ ಮೊಗ್ರ, ಕುಸುಮಾಧರ ಎ.ಟಿ, ಹೇಮಂತ್ ಕಂದಡ್ಕ, ಹೇಮಂತ್ ಮಠ, ಶಿವಪ್ರಸಾದ್ ಉಗ್ರಾಣಿ ಮನೆ, ಕಿಶನ್ ಜಬಳೆ,ರಜತ್ ಅಡ್ಕಾರು, ಜಗದೀಶ್ ಡಿ.ಪಿ ಮತ್ತು ಸಂಘಟನೆಯ ಕಾರ್ಯಕರ್ತರು ಸಭೆಯಲ್ಲಿ ಉಪಸ್ಥಿತರಿದ್ದರು.

ಗೋ ಸಂತತಿಯ ರಕ್ಷಣೆ, ಉತ್ಪನ್ನಗಳ ಪ್ರಚಾರ, ಮಣ್ಣು ಉಳಿಸುವ ನಂದಿ ಕೃಷಿ ಜಾಗೃತಿ ಹಿನ್ನೆಲೆಯಲ್ಲಿ ಈ ರಥಯಾತ್ರೆ ರಾಜ್ಯಾದ್ಯಂತ ಸಂಚರಿಸಲಿದೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!