
ಗುತ್ತಿಗಾರು ಕಮಿಲ ರಸ್ತೆಯ ಪುಚ್ಚಪ್ಪಾಡಿ ಬಸ್ ನಿಲ್ದಾಣದ ಸಮೀಪ ಅಟೋ ರಿಕ್ಷಾ ಹಾಗೂ ಬೈಕ್ ನಡುವೆ ಅಪಘಾತ ನಡೆದ ಘಟನೆ ಇಂದು ಸಂಜೆ ನಡೆದಿದೆ. ಅಪಘಾತದ ರಭಸಕ್ಕೆ ಬೈಕ್ ಸವಾರನ ಜಗದೀಶ್ ಕೊರ್ತ್ಯಡ್ಕ ತಲೆ ಹಾಗೂ ಭುಜಕ್ಕೆ ಗಾಯಗಳಾಗಿದ್ದು ಸುಳ್ಯದ ಕೆ.ವಿ.ಜಿ.ಆಸ್ಪತ್ರೆಗೆ ಕರೆತರಲಾಗಿದೆ. ಅಟೋ ಚಾಲಕ ಶಶಿ ಚಣಿಲ ಹಾಗೂ ಮೂವರು ಪ್ರಯಾಣಿಕರಿಗೆ ಗಾಯಗಳಾಗಿದೆ ಎಂದು ತಿಳಿದುಬಂದಿದೆ.
