
ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷರಾದ ಎಂ.ಕೆ ಯವರನ್ನು ಅನ್ಯಾಯವಾಗಿ ಸುಳ್ಳು ಆರೋಪ ಹೊರಿಸಿ ಬಂಧನ ಮಾಡಿದ್ದಾರೆಂದು ಆರೋಪಿಸಿ ರಾಷ್ಟ್ರಾದ್ಯಂತ ಎಸ್.ಡಿ.ಪಿ.ಐ. ದಿಢೀರ್ ಪ್ರತಿಭಟನೆ ನಡೆಸಿತು.
ಸುಳ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಲವೆಡೆ ಪ್ರತಿಭಟನೆಯನ್ನು ಮಾಡಲಾಯಿತು,
ಸುಳ್ಯ ಬ್ಲಾಕ್ ಸಮಿತಿ ವತಿಯಿಂದ ಗಾಂಧಿ ಪಾರ್ಕ್ (ಮಹಾತ್ಮ ಗಾಂಧಿಯವರ ಪುತ್ತಳಿಯ ಮುಂಭಾಗ)
ಬೆಳ್ಳಾರೆ ಬ್ಲಾಕ್ ಸಮಿತಿ ವತಿಯಿಂದ ಸವಣೂರು ಜಂಕ್ಷನ್, ಕಡಬ ಬ್ಲಾಕ್ ಸಮಿತಿ ವತಿಯಿಂದ ನೆಲ್ಯಾಡಿ ಪೇಟೆ ಮತ್ತಿತರ ಕಡೆಗಳಲ್ಲಿ ಪ್ರತಿಭಟನೆಯನ್ನು ಆಯೋಜಿಸಲಾಯಿತು.
