
ಸುಳ್ಯದ ಯುವ ಸಂಗೀತ ಹಾಗೂ ಚಿತ್ರ ನಿರ್ದೇಶಕ ಮಯೂರ ಅಂಬೆಕಲ್ಲು ನಿರ್ಮಾಣದ “ಭಾವ ತೀರ ಯಾನ” ಸಿನಿಮಾ ರಾಜ್ಯಾದ್ಯಾಂತ ಪ್ರೇಕ್ಷಕರ ಮೆಚ್ಚುಗೆ ಪಡೆದು ಹೌಸ್ ಫುಲ್ ಪ್ರದರ್ಶನದೊಂದಿಗೆ ಎರಡನೇ ವಾರದಲ್ಲಿ ಮುಂದುವರೆಯಿತ್ತಿದೆ. ಪುತ್ತೂರಿನ ಭಾರತ್ ಸಿನಿಮಾಸ್ ನಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದ್ದು, ಬೇಡಿಕೆ ಹಿನ್ನೆಲೆಯಲ್ಲಿ ಮಾ. 03 ರಿಂದ 06 ರವರೆಗೆ ಸಂಜೆ 7.15 ಕ್ಕೆ ಶೋ ನೀಡಲು ನಿರ್ಧರಿಸಲಾಗಿದೆ. ಕೌಂಟರ್’ನಲ್ಲಿ ಟಿಕೆಟ್ ಪಡೆದುಕೊಳ್ಳಲು ಕಷ್ಟ ಸಾಧ್ಯವಾಗುವವರು Book My Show Appನಲ್ಲಿ ticketಗಳನ್ನು ಕಾಯ್ದಿರಿಸಿಕೊಳ್ಳಬಹುದು ಎಂದು ನಿರ್ಮಾಪಕರು ತಿಳಿಸಿದ್ದಾರೆ.
