
ಅಡ್ತಲೆ ಬೆದ್ರುಪಣೆ ಶ್ರೀ ಉಳ್ಳಾಕುಲು ಮತ್ತು ಮಲೆದೈವಗಳ ದೈವಸ್ಥಾನ ಇದರ ಆಡಳಿತ ಸಮಿತಿಯ ಸಭೆ ಮಾ.1ರಂದು ನಡೆಯಿತು.ಈ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ನೂತನ ಅಧ್ಯಕ್ಷರಾಗಿ ಸದಾನಂದ ಅಡ್ತಲೆ ಹಾಗೂ ಕಾರ್ಯದರ್ಶಿಯಾಗಿ ಪ್ರಸನ್ನ ಪಿಂಡಿಮನೆ ಇವರನ್ನು ಆಯ್ಕೆ ಮಾಡಲಾಯಿತು. ಸದಸ್ಯರುಗಳಾಗಿ ಶಿವಪ್ರಸಾದ್ ಮೇಲಡ್ತಲೆ, ಚಂದ್ರಶೇಖರ ಮೂರ್ಜೆ, ಯತೀಶ್ ನೆಕ್ಕರೆ ಆಯ್ಕೆಯಾದರು.
