
ಅಡ್ತಲೆ ಉಳ್ಳಾಕುಲು ಹಾಗೂ ಮಲೆದೈವಗಳ ದೈವಸ್ಥಾನ ಅಡ್ತಲೆ ಬೆದ್ರುಪಣೆ ಇದರ ಆಡಳಿತ ಸಮಿತಿ ವಾರ್ಷಿಕ ಮಹಾ ಸಭೆ ಮಾ. 1ರಂದು ಸಮಿತಿಯ ಅಧ್ಯಕ್ಷರಾದ ಗಣೇಶ್ ಮಾಸ್ತರ್ ಅಡ್ತಲೆ ಯವರ ಅಧ್ಯಕ್ಷತೆಯಲ್ಲಿ ದೈವಸ್ಥಾನ ವಠಾರದಲ್ಲಿ ನಡೆಯಿತು. ಈ ವರ್ಷದ ಉಳ್ಳಾಕುಲು ಮತ್ತು ಮಲೆ ದೈವಗಳ ನಡಾವಳಿಯನ್ನು ವರ್ಷಂಪ್ರತಿಯಂತೆ ಮಾರ್ಚ್ ತಿಂಗಳ 21ರಂದು ಕೂಡಿ ಮಾರ್ಚ್ ತಿಂಗಳ 22ನೇ ಶನಿವಾರ ದಂದು ಅಡ್ತಲೆ ಮೂಲ ದೈವಸ್ಥಾನದಲ್ಲಿ ನಡೆಸುವುದೆಂದು ತೀರ್ಮಾನಿಸಲಾಯಿತು. ಆಡಳಿತ ಸಮಿತಿ ಕಾರ್ಯದರ್ಶಿ ಪ್ರಸನ್ನ ಪಿಂಡಿಮನೆ ವಾರ್ಷಿಕ ವರದಿ ವಾಚಿಸಿದರು. ವಾರ್ಷಿಕ ಸಭೆಯ ವೇದಿಕೆಯಲ್ಲಿ ಹಿರಿಯರಾದ ಹೊನ್ನಪ್ಪ ಮಾಸ್ತರ್, ಅಡ್ತಲೆ ಬಂಡಾರಮನೆಯವರು ಮತ್ತು ಅಡ್ತಲೆ -ಬೆದ್ರುಪಣೆ ಹತ್ತು ಕುಟುಂಬದ ಹತ್ತು ಸಮಸ್ತರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು. ಸಮಿತಿ ಅಧ್ಯಕ್ಷರಾದ ಗಣೇಶ್ ಮಾಸ್ತರ್ ಸ್ವಾಗತಿಸಿ , ವಂದಿಸಿದರು.
