
ರೋಟರಿ ಸಂಸ್ಥೆಯ ವತಿಯಿಂದ ಸೋಣಂಗೇರಿಯಲ್ಲಿ ಸುಮಾರು 3.45 ಲಕ್ಷ ರೂ ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡ ಬಸ್ ನಿಲ್ದಾಣದ ಉದ್ಘಾಟನೆ ಇಂದು ನಡೆಯಿತು. ರೋಟರಿ ಜಿಲ್ಲಾ 3181 ರ ಗವರ್ನರ್ ವಿಕ್ರಂ ದತ್ತ ಉದ್ಘಾಟನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಡಾ. ಶಿವಪ್ರಸಾದ್ , ಝೋನ್ 5 ಅಸಿಸ್ಟೆಂಟ್ ಗವರ್ನರ್ ವಿನಯಕುಮಾರ್ ಕೆ., ರೋ.ಪ್ರಭಾಕರ ನಾಯರ್, ರೋಟರಿ ಕ್ಲಬ್ ಅಧ್ಯಕ್ಷೆ ರೋ.ಯೋಗಿತಾ ಗೋಪಿನಾಥ್, ರೋ. ಹರ್ಷಿತಾ ಪುರುಷೋತ್ತಮ, ರೋಟರಿ ಕ್ಲಬ್ ನ ಸದಸ್ಯರು ಹಾಗು ಸ್ಥಳೀಯರು ಉಪಸ್ಥಿತರಿದ್ದರು.

