
ಮಾರ್ಚ್ 1 ಹಾಗೂ ಮಾರ್ಚ್ 2 ಗುತ್ತಿಗಾರಿನಲ್ಲಿ ಮೂರನೇ ವರ್ಷದ ದೇವಶ್ಯ ಗೌಡ ಕಪ್-2025 ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟ ನಡೆಯಲಿದೆ.
ದಕ್ಷಿಣಕನ್ನಡ, ಕೊಡಗು, ಕಾಸರಗೋಡು ಜಿಲ್ಲೆಗಳ ಮೂರನೇ ವರ್ಷದ ನಿಗದಿತ ಓವರ್ ಗೌಡ ಮನೆತನಗಳ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಮಾರ್ಚ್ 1 ಶನಿವಾರ ಹಾಗೂ ಮಾರ್ಚ್ 2 ಆದಿತ್ಯವಾರ ಗುತ್ತಿಗಾರಿನ ಪಿ.ಎಂ.ಶ್ರೀ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಲಿದೆ…. ಪ್ರಥಮ ಬಹುಮಾನವಾಗಿ 22222 ನಗದು ಮತ್ತು ದೇವಶ್ಯ ಕಪ್, ದ್ವಿತೀಯ ಬಹುಮಾನ 11111 ನಗದು ಮತ್ತು ದೇವಶ್ಯ ಕಪ್, ಸೆಮಿಫೈನಲ್ ನಿರ್ಗಮಿತ ತಂಡಗಳಿಗೆ ತಲಾ 2222 ನಗದು ಮತ್ತು ದೇವಶ್ಯ ಕಪ್ ನೀಡಲಾಗುವುದು ಮತ್ತು ಶಿಸ್ತುಬದ್ದ ತಂಡಕ್ಕೆ ಟ್ರೋಫಿ ಹಾಗೂ ವೈಯುಕ್ತಿಕ ಬಹುಮಾನವಾಗಿ ಉತ್ತಮ ದಾಂಡಿಗ ನಗದು ಮತ್ತು ಟ್ರೋಫಿ , ಉತ್ತಮ ಎಸೆತಗಾರ ನಗದು ಮತ್ತು ಟ್ರೋಫಿ, ಉತ್ತಮ ಗೂಟರಕ್ಷಕ ನಗದು ಮತ್ತು ಟ್ರೋಫಿ, ಉತ್ತಮ ಮಹಿಳಾ ಆಟಗಾರ್ತಿ ನಗದು ಮತ್ತು ಟ್ರೋಫಿ, ಫೈನಲ್ ಪಂದ್ಯಶ್ರೇಷ್ಠ ನಗದು ಮತ್ತು ಟ್ರೋಫಿ, ಸರ್ವಾಂಗೀಣ ಆಟಗಾರ ನಗದು ಮತ್ತು ಟ್ರೋಫಿ, ಭಾಗವಹಿಸುವ ಎಲ್ಲಾ ತಂಡಗಳಿಗೆ ಸ್ಮರಣಿಕೆ ಮತ್ತು ಆಕರ್ಷಕ ಬಹುಮಾನ, ಪ್ರತೀ ಪಂದ್ಯಾಟದ ಪಂದ್ಯಶ್ರೇಷ್ಠ ಪ್ರಶಸ್ತಿ ಮತ್ತು ಆದಿತ್ಯವಾರದ ಸಮಾರೋಪ ಸಮಾರಂಭದಲ್ಲಿ ಪ್ರಗತಿಪರ ಕ್ರಷಿಕರು, ಗುತ್ತಿಗಾರು ದೇವಿಸಿಟಿ ಕಾಂಪ್ಲೆಕ್ಸ್ ಮಾಲಕರು ಆಗಿರುವ ಶ್ರೀ ದೊಡ್ಡಣ್ಣ ಗೌಡ ಚಿಕ್ಮುಳಿ ಹಾಗೂ ರಾಷ್ಟ್ರೀಯ ಯೋಗಪಟು ಆಗಿರುವ ಮಣಿಪ್ರಕಾಶ್ ಕಡೋಡಿ ಇವರಿಗೆ ಸನ್ಮಾನ ಕಾರ್ಯಕ್ರಮ ಇದೆ ಹಾಗೂ ಎಲ್ಲರಿಗೂ ಎರಡು ದಿನ ಉಚಿತ ಭೋಜನದ ವ್ಯವಸ್ಥೆ ಇರಲಿದೆ ಎಂದು ದೇವಶ್ಯ ಕ್ರಿಕೆಟ್ ಸಮಿತಿಯವರು ತಿಳಿಸಿದ್ದಾರೆ
