
ವಿವೇಕ ಜಾಗೃತ ಬಳಗ ಏನೆಕಲ್ಲು ಇದರ ವತಿಯಿಂದ ರೋಟರಿ ಕ್ಯಾಮ್ಕೋ ಬ್ಲಡ್ ಸೆಂಟರ್ ಪುತ್ತೂರು ಇವರ ಸಹಕಾರದೊಂದಿಗೆ ಏನೆಕಲ್ಲಿನ ಆದಿಶಕ್ತಿ ಭಜನಾಮಂದಿರದಲ್ಲಿ ಫೆ.26 ರಂದು ರಕ್ತದಾನ ಶಿಬಿರವು ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮವನ್ನು ಸುಬ್ರಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ. ತ್ರಿಮೂರ್ತಿಯವರು ಉದ್ಘಾಟಿಸಿ ಶಿಬಿರದ ಬಗ್ಗೆ ಮಾಹಿತಿ ನೀಡಿದರು, ವೇದಿಕೆಯಲ್ಲಿ ವಿವೇಕ ಜಾಗೃತ ಬಳಗದ ಅಧ್ಯಕ್ಷರಾದ ಹವೀನ್ ಬಾಲಾಡಿ ಮತ್ತು ಮೋನಪ್ಪ ಕಲ್ಲಾಜೆ ಉಪಸ್ಥಿತರಿದ್ದರು. ಡಿವೈನ್ ಪಾರ್ಕ್ ನ S2 ಸೇವಕ ಸುಂದರ ಗೌಡ ಮೂಲಂಗೇರಿಯವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
