
ಮಾವಿನಕಟ್ಟೆ ಶ್ರೀ ವಿಷ್ಣುಮೂರ್ತಿ ದೈವಸ್ಥಾನದಲ್ಲಿ ಮಾ.18 ಮತ್ತು 19 ರಂದು ನಡೆಯಲಿರುವ ಶ್ರೀ ದೈವದ ಒತ್ತೆಕೋಲ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಫೆ.26 ರಂದು ದೈವಸ್ಥಾನದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ದೈವಸ್ಥಾನದ ಅಧ್ಯಕ್ಷರಾದ ಎ.ವಿ. ತೀರ್ಥರಾಮ ಅಂಬೆಕಲ್ಲು, ಪ್ರ.ಕಾರ್ಯದರ್ಶಿ ರಾಧಾಕೃಷ್ಣ ಶ್ರೀ ಕಟೀಲ್ ಮಾವಿನಕಟ್ಟೆ, ಆಡಳಿತ ಮಂಡಳಿ ಸದಸ್ಯರಾದ ಕೃಷ್ಣಪ್ಪಗೌಡ ಮಾವಿನಕಟ್ಟೆ, ನಿತ್ಯಾನಂದ ಪಾರೆಪ್ಪಾಡಿ, ಜಗತ್ ಪಾರೆಪ್ಪಾಡಿ, ಭಾಸ್ಕರ ಬಾಳೆತೋಟ, ಲೋಕೇಶ್ ಪೂಜಾರಿ ತಳೂರು, ರಾಮಚಂದ್ರ ನಾಗನಗದ್ದೆ, ನರಸಿಂಹ ಗೌಡ ಮೆತ್ತಡ್ಕ, ಶ್ರೀಕಾಂತ್ ಮಾವಿನಕಟ್ಟೆ ಜನಾರ್ಧನ ನಾಯ್ಕ್ ಅಚ್ರಪ್ಪಾಡಿ, ಯೋಗೀಶ್ ದೇವ, ಭಾಸ್ಕರ ಮೆದು, ಶ್ರೀ ವಿಷ್ಣು ಸೇವಾ ಸಮಿತಿಯ ಅಧ್ಯಕ್ಷರಾದ ಹರಿಶ್ಚಂದ್ರ ಕೇಪಳಕಜೆ , ಸದಸ್ಯರಾದ ವಿವೇಕ್ ಕಲ್ಲುಪಣೆ ,ರೋಹಿಣಿ ಪ್ರದೀಪ್ ಮಾವಿನಕಟ್ಟೆ ಮತ್ತಿತರರು ಉಪಸ್ಥಿತರಿದ್ದರು.
