
ಕೊಲ್ಲಮೊಗ್ರ ಗ್ರಾಮದ ಪಡಿಕಲ್ಲು ಚಾಳೆಪ್ಪಾಡಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗ್ರಾಮಸ್ಥರಾದ ಪರಮೇಶ್ವರ ಗೌಡರು ತೆಂಗಿನಕಾಯಿ ಒಡೆಯುವ ಮೂಲಕ ಫೆ.26 ರಂದು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷರಾದ ಮೋಹಿನಿ ಕಟ್ಟ ಉಪಾಧ್ಯಕ್ಷರಾದ ಮಾಧವ ಚಾಂತಾಳ, ಸದಸ್ಯರಾದ ಬಾಲಸುಬ್ರಮಣ್ಯ ಭಟ್, ಕೊಲ್ಲಮೊಗ್ರ ಶಕ್ತಿ ಕೇಂದ್ರದ ಪ್ರಮುಖರಾದ ಕಮಲಾಕ್ಷ ಗೌಡ ಮುಳ್ಳುಬಾಗಿಲು. ಬೂತ್ ಅಧ್ಯಕ್ಷರಾದ ಹೂವಪ್ಪ ಸಂಪ್ಯಾಡಿ, ಕಾರ್ಯದರ್ಶಿ ಹರೀಶ್ ಬಳ್ಳಡ್ಕ, ರಸ್ತೆ ಪಲಾನುಭವಿಗಳಾದ ಆನಂದ ಗೌಡ ದೋಲನ ಸತೀಶ್ ದೋಲನ, ನೇಮಿಚಂದ್ರ ಬಳ್ಳಡ್ಕ, ಧರ್ಮಪಾಲ ಗೌಡ ಬಳ್ಳಡ್ಕ, ವಿಜಯ ದೋಲನ, ಸಾವಿತ್ರಿ ಪಡಿಕಲ್ಲು, ಕಮಲಾಕ್ಷ ಗೌಡ ಕಣಜಾಲು, ನೀಲಪ್ಪ ಗೌಡ ಕಣಜಾಲು, ವೆಂಕಟ್ರಮಣ ಕೊಂದಾಳ, ಬಾಲಕೃಷ್ಣ ಗೌಡ, ವಿನೋದ ಕಣಜಾಲು, ಮಾಲಿನಿ ಆನಾಜೆ, ಲತಾ ಅಂಬೆಕಲ್ಲು, ಸುಕುಮಾರ್ ಚಾಳೆಪ್ಪಾಡಿ ಮನೋಜ್ ಪೆರ್ನಾಜೆ, ಸುಧಾಮಣಿ ಕುಂಞೇಟಿ ಮೊದಲಾದವರು ಉಪಸ್ಥಿತರಿದ್ದರು. ಹರೀಶ್ ಬಳ್ಳಡ್ಕ ಸ್ವಾಗತಿಸಿ,ವಂದಿಸಿದರು.
