


ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಪಂಜ ಇದರ ವತಿಯಿಂದ ಚಿಂತನ ದಿನಾಚರಣೆ ಮತ್ತು ಸ್ಥಳೀಯ ಸಂಸ್ಥೆಯ ವ್ಯಾಪ್ತಿಯಲ್ಲಿರುವ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಸ್ಕೌಟ್ ಗೈಡ್ ವಿದ್ಯಾರ್ಥಿಗಳಿಗೆ ದ್ವಿತೀಯ ಸೋಪಾನ ಪರೀಕ್ಷಾ ಶಿಬಿರವನ್ನು ಫೆ.22ರಂದು ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲೆ ಬಾಳಿಲ ಇಲ್ಲಿ ಆಯೋಜಿಸಲಾಯಿತು. 84 ಸ್ಕೌಟ್ಸ್ ಮತ್ತು 105 ಗೈಡ್ಸ್ ಪರೀಕ್ಷಾ ಶಿಬಿರದಲ್ಲಿ ಭಾಗವಹಿಸಿದ್ದರು. ಈ ಶಿಬಿರದಲ್ಲಿ ಜಿಲ್ಲಾ ಗೈಡ್ ಆಯುಕ್ತೆ ಶ್ರೀಮತಿ ವಿಮಲಾರಂಗಯ್ಯ ಚಿಂತನ ದಿನಾಚರಣೆಯ ಮಹತ್ವವನ್ನು ತಿಳಿಸಿದರು. ಬಾಳಿಲ ವಿದ್ಯಾಸಂಸ್ಥೆಯ ಸಂಚಾಲಕರಾದ ಪಿ.ಜಿ.ಎಸ್.ಎನ್ ಪ್ರಸಾದ್, ಪ್ರೌಢಶಾಲಾ ಮುಖ್ಯ ಗುರುಗಳಾದ ಯಶೋಧರ ಎನ್ ಭಾಗವಹಿಸಿ ಶುಭ ಹಾರೈಸಿದರು. ಸ್ಥಳೀಯ ಸಂಸ್ಥೆಯ ಅಧ್ಯಕ್ಷರಾದ ಮಾಧವ.ಬಿ.ಕೆ ಅಧ್ಯಕ್ಷತೆಯನ್ನು ವಹಿಸಿದ್ದರು. ಸ್ಕೌಟರ್ ಲಿಂಗಪ್ಪ ಬೆಳ್ಳಾರೆ ವಂದಿಸಿದರು. ಈ ಕಾರ್ಯಕ್ರಮವನ್ನು ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಉದಯಕುಮಾರ್ ರೈ ಬಾಳಿಲ ಸ್ವಾಗತಿಸಿ, ನಿರೂಪಿಸಿದರು. ಸ್ಕೌಟರ್ ಅರವಿಂದ ಕೆ.ಜಿ ಹಾಗೂ ಗೈಡರ್ ಸರೋಜಿನಿ.ಕೆ ಶಿಬಿರ ನಾಯಕರಾಗಿ ಸಹಕರಿಸಿದರು. ಸ್ಥಳೀಯ ಸಂಸ್ಥೆಯ ಪದಾಧಿಕಾರಿಗಳು ಮತ್ತು ಸ್ಕೌಟ್ ಗೈಡ್ ಶಿಕ್ಷಕರು ಭಾಗವಹಿಸಿದ್ದರು.