
ತುಳುನಾಡಿನ ಕರಾವಳಿಯ ಸುಳ್ಯದ ಬಹುಮುಖಿ ಪ್ರತಿಭೆ ಯುವ ಸಂಗೀತ ನಿರ್ದೇಶಕ ಮಯೂರ ಅಂಬೆಕಲ್ಲು ನಿರ್ಮಾಣದ ಸಿನಿಮಾ “ಭಾವ ತೀರ ಯಾನ” ಫೆ.21 ರಂದು ರಾಜ್ಯಾದ್ಯಾಂತ ತೆರೆ ಕಂಡಿದ್ದು ಎಲ್ಲರ ಮೆಚ್ಚುಗೆ ಪಾತ್ರವಾಗಿದ್ದು ಹೌಸ್ ಫುಲ್ ಪ್ರದರ್ಶನಗೊಂಡ ಸಿನೇಮಾಕ್ಕೆ ಜನರಿಂದ ಉತ್ತಮ ಅಭಿಪ್ರಾಯ ವ್ಯಕ್ತವಾಗಿದೆ.
ಪುತ್ತೂರಿನ GL ONE Mallನ ಭಾರತ್ ಸಿನಿಮಾಸ್ – Screen 2ರಲ್ಲಿ ಬಿಡುಗಡೆ ಹಿನ್ಬೆಲೆಯಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಚಲನಚಿತ್ರ ಮತ್ತು ಧಾರಾವಾಹಿಗಳ ಅಭಿನೇತ್ರಿ ಶ್ರೀಮತಿ ವಸಂತಲಕ್ಷ್ಮೀ ಶಶಿಧರ್ ದೀಪ ಬೆಳಗಿಸಿ ಉದ್ಘಾಟಿಸಿದರು. ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಕೆ. ರಾಜೇಂದ್ರಪ್ರಸಾದ್ ಶೆಟ್ಟಿ ಎಣ್ಮೂರುಗುತ್ತು ಅಧ್ಯಕ್ಷತೆ ವಹಿಸಿದ್ದರು. ಭಾವನಾ ಬಳಗ ಸುಳ್ಯ ಇದರ ಕೆ.ಆರ್.ಗೋಪಾಲಕೃಷ್ಣ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು. ಸೀತಾರಾಮ ಕೇವಳ ಸ್ವಾಗತಿಸಿದರು.
