
ದೇವಚಳ್ಳ ಗ್ರಾಮದ ಕಂದ್ರಪ್ಪಾಡಿಯಲ್ಲಿ ಸಾಮಾಜಿಕ ಕಳಕಳಿಯತ್ತ ಯುವ ಮನಸ್ಸುಗಳ ಚಿತ್ತ ಎಂಬ ಪರಿಕಲ್ಪನೆಯೊಂದಿಗೆ 2021ರಲ್ಲಿ ಅಸ್ತಿತ್ವಕ್ಕೆ ಬಂದ ಸೌಹಾರ್ದ ಸ್ಪೋರ್ಟ್ಸ್ ಕ್ಲಬ್ (ರಿ) ಕಂದ್ರಪ್ಪಾಡಿ ಇದರ ಆಶ್ರಯದಲ್ಲಿ 4ನೇ ವರ್ಷದ 6 ತಂಡಗಳ ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾಟ ಫೆಬ್ರವರಿ 2 ರಂದು ಕಂದ್ರಪ್ಪಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಿತು. ಪಂದ್ಯಾಟದ ಉದ್ಘಾಟನೆಯನ್ನು ನಿವೃತ್ತ ಶಿಕ್ಷಕರಾದ ಶ್ರೀ ಕುಶಾಲಪ್ಪ ಗೌಡ ರುದ್ರಚಾಮುಂಡಿ ನಿಲಯ ಕಂದ್ರಪ್ಪಾಡಿ ನೆರವೇರಿಸಿದರು, ಶಾಶ್ವತ ಫಲಕವನ್ನು ನಿವೃತ ಶಿಕ್ಷಕರಾದ ಶ್ರೀ ಬಾಲಕೃಷ್ಣ ಗೌಡ ಹಿರಿಯಡ್ಕ ಇವರು ಅನಾವರಣಗೊಳಿಸಿದರು, ಕಂದ್ರಪ್ಪಾಡಿ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ವಾಣಿ ಪುರುಷೋತ್ತಮ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. 6 ತಂಡಗಳ ಮಧ್ಯೆ ನಡೆದ ಕ್ರಿಕೆಟ್ ಪಂದ್ಯಾಟದಲ್ಲಿ ಶ್ರೀ ಉಮೇಶ್ ಮುಂಡೋಡಿ ಮಾಲಕತ್ವದ ಮುಂಡೋಡಿ ವಾರಿಯರ್ಸ್ ಪ್ರಥಮ ಸ್ಥಾನ, ಶ್ರೀ ರಮಿತ್ ಹೆಡ್ಡನಮನೆ ಮತ್ತು ಶ್ರೀ ಮದನ್ ಕೊಲ್ಯ ಮಾಲಕತ್ವದ ಅಕ್ಷಯ ಮೊಬೈಲ್ಸ್ ದ್ವಿತೀಯ, ಸಾಧ್ವಿ ಕ್ರಿಕೆಟರ್ಸ್ ತೃತೀಯ ಮತ್ತು ಎಸ್.ಎಮ್.ಸಿ. ಮುಳ್ಳುಬಾಗಿಲು ಚತುರ್ಥ ಬಹುಮಾನವನ್ನು ಪಡೆದುಕೊಂಡಿತು. ವೈಯಕ್ತಿಕ ಬಹುಮಾನಗಳಾದ ಫೈನಲ್ ಪಂದ್ಯದ ಪಂದ್ಯಶ್ರೇಷ್ಠ ಶೃಜನ್ ಮುಂಡೋಡಿ, ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪ್ರಸನ್ನ ಕಾಯರ, ಉತ್ತಮ ದಾಂಡಿಗನಾಗಿ ರಜತ್ ಮುಂಡೋಡಿ, ಉತ್ತಮ ಎಸೆತಗಾರ ರೇವಂತ್ ಹೆಡ್ಡನಮನೆ, ಉತ್ತಮ ಗೂಟರಕ್ಷಕ ನಿಶಿತ್ ಮುಂಡೋಡಿ, ಉತ್ತಮ ಕ್ಷೇತ್ರರಕ್ಷಕ ಪ್ರಶಸ್ತಿಯನ್ನು ಓಂ ಪ್ರಸಾದ್ ವಾಲ್ತಾಜೆ ಪಡೆದುಕೊಂಡರು. ಸಮಾರೋಪ ಸಮಾರಂಭದ ಸಭಾಧ್ಯಕ್ಷತೆಯನ್ನು ಸೌಹಾರ್ದ ಸ್ಪೋರ್ಟ್ಸ್ ಕ್ಲಬ್ (ರಿ) ಕಂದ್ರಪ್ಪಾಡಿ ಇದರ ಅಧ್ಯಕ್ಷರಾದ ಶ್ರೀಯುತ ಸುಕುಮಾರ್ ಕಂದ್ರಪ್ಪಾಡಿ ಇವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ ದಿವಾಕರ ಮುಂಡೋಡಿ ಮಾಜಿ ಅಧ್ಯಕ್ಷರು – ಗ್ರಾಮ ಪಂಚಾಯತ್ ದೇವಚಳ್ಳ, ಯುವಜನ ಸಂಯುಕ್ತ ಮಂಡಳಿ ಇದರ ನಿರ್ದೇಶಕರಾದ ವಿಜೇಶ್ ಹಿರಿಯಡ್ಕ , ಉದಯ ಮುಂಡೋಡಿ – ಅಧ್ಯಕ್ಷರು ದೇವಚಳ್ಳ ಯುವಕ ಮಂಡಲ(ರಿ.) ಕಂದ್ರಪ್ಪಾಡಿ, ಕೆನಡಾದಲ್ಲಿ ಉದ್ಯಮಿಗಳಾದ ಶ್ರೀ ಉಮೇಶ್ ಮುಂಡೋಡಿ, ಕಂದ್ರಪ್ಪಾಡಿ ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಶ್ರೀಮತಿ ವೀಣಾ ಮತ್ತು ಸೌಹಾರ್ದ ಸ್ಪೋರ್ಟ್ಸ್ ಕ್ಲಬ್ (ರಿ) ಕಂದ್ರಪ್ಪಾಡಿ ಇದರ ಕ್ರೀಡಾ ಕಾರ್ಯದರ್ಶಿಯಾದ ರಜತ್ ಮುಂಡೋಡಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕಂದ್ರಪ್ಪಾಡಿ ಶಾಲೆಗೆ ಸೌಹಾರ್ದ ಸ್ಪೋರ್ಟ್ಸ್ ಕ್ಲಬ್ (ರಿ) ಕಂದ್ರಪ್ಪಾಡಿ ಇದರ ವತಿಯಿಂದ ಚಯರ್ ಅನ್ನು ಕೊಡುಗೆಯಾಗಿ ನೀಡಲಾಯಿತು. ಕಾರ್ತಿಕ್ ದೇವ ಕಾರ್ಯಕ್ರಮ ನಿರೂಪಣೆ ಮಾಡಿದರು.
