
ರಾಜ್ಯ ಪ್ರಶಸ್ತಿ ಪುರಸ್ಕೃತ ಭಾವೈಕ್ಯ ಯುವಕ ಮಂಡಲ ಪೆರುವಾಜೆ, ಭಾವೈಕ್ಯ ಮಹಿಳಾ ಮಂಡಲ ಹಾಗೂ ಭಾವೈಕ್ಯ ಚಿಗುರು ವೇದಿಕೆ ಪೆರುವಾಜೆ ಇದರ ಸಹಯೋಗದೊಂದಿಗೆ ಪೆರುವಾಜೆ ಮ್ಯಾರಥಾನ್ 2025 ಫೆ.09 ರಂದು
ಯುವಕ ಮಂಡಲದ ಆವರಣದಲ್ಲಿ ನಡೆಯಿತು..
ರಾಷ್ಟ್ರೀಯ ಕ್ರೀಡಾಪಟು ಸುಬ್ರಹ್ಮಣ್ಯ ಕೆ ಎಮ್ ಮ್ಯಾರಥಾನ್ ಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಲ.ಉಷಾದೇವಿ ರಾವ್ ಪೆರುವಾಜೆ, ಭಾವೈಕ್ಯ ಯುವಕ ಮಂಡಲದ ಮಾಜಿ ಅಧ್ಯಕ್ಷರಾದ ವೇದವ್ಯಾಸ ಭಟ್
ಗೌರವಾಧ್ಯಕ್ಷ ಜಯಪ್ರಕಾಶ್, ಯುವಕ ಮಂಡಲದ ಅಧ್ಯಕ್ಷರಾದ
ಜಯಚಂದ್ರ ಪೆರುವಾಜೆ, ಕಾರ್ಯದರ್ಶಿ ರಕ್ಷಿತ್ ಪೆರುವಾಜೆ, ಕ್ರೀಡಾ ಕಾರ್ಯದರ್ಶಿ ಸುಜಿತ್ ಆಚಾರ್ಯ, ಭಾವೈಕ್ಯ ಯುವತಿ ಮಂಡಲದ ಅಧ್ಯಕ್ಷೆ ಅನುಸೂಯ ಉಪಸ್ಥಿತರಿದ್ದರು.
14 ಮತ್ತು 17 ವರ್ಷದೊಳಗಿನ
ಬಾಲಕ ಮತ್ತು ಬಾಲಕಿಯರಿಗೆ ಪ್ರತ್ಯೇಕವಾಗಿ ಮ್ಯಾರಥಾನ್ ಓಟ ನಡೆಯಿತು. ಈ ಮ್ಯಾರಥಾನ್ ನಲ್ಲಿ 163 ಕ್ರೀಡಾಪಟುಗಳು ಭಾಗವಹಿಸಿದ್ದರು
14 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಹನುಮಂತು ವನಸುಮ, ಮೋಕ್ಷಿತ್ ರಾಮಕುಂಜ, ಪ್ರೀತಂ ಬಾಳಿಲ, ಪೂರ್ಣೇಶ್ ರಾಮಕುಂಜ, ರಾಮು ವನಸುಮ, ಶ್ರವಣ್ ಪ್ರಗತಿ ವಿಜೇತರಾದರು. 14 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಶ್ರುತಿ ಕಡಬ, ಅನನ್ಯ ಕಡಬ, ಮೇಘ ಕಡಬ, ಮಲ್ಲಮ್ಮ ಕಡಬ, ಪುನರ್ವಿ ಬಿಳಿನೆಲೆ, ಪೂಜಿತ ಬಿಳಿನೆಲೆ ವಿಜೇತರಾದರು.
17 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಪ್ರೇಕ್ಷಕ್ ಪ್ರಗತಿ ಕಾಣಿಯೂರು, ಭರತ್ ರಾಮಕುಂಜ, ರೋಹನ್ ರಾಮಕುಂಜ, ಆಕಾಶ್ ರಾಮಕುಂಜ, ಹರ್ಶಿತ್ ರಾಮಕುಂಜ, ಆಶಿತ್ ಬಿಳಿನೆಲೆ. ವಿಜೇತರಾದರು. 17 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಚರೀಷ್ಮಾ ಕಡಬ, ಗಾನವಿ ಕಡಬ, ಮೋಕ್ಷ ಬೆಥನಿ, ಸಿಂಚನ ಕಾಣಿಯೂರು, ಧನಲಕ್ಷ್ಮಿ ಪ್ರಗತಿ ಕಾಣಿಯೂರು, ಚೈತನ್ಯ ಬಿಳಿನೆಲೆ ವಿಜೇತರಾದರು.
ಕಾರ್ಯದರ್ಶಿ ರಕ್ಷಿತ್ ಪೆರುವಾಜೆ ಸ್ವಾಗತಿಸಿ, ಪ್ರಜ್ಞಾ ಆಚಾರ್ಯ ವಂದಿಸಿದರು. ವಾಸುದೇವ ಪೆರುವಾಜೆ ಕಾರ್ಯಕ್ರಮ ನಿರೂಪಿಸಿದರು.
