
ಹರಿಹರ ಪಳ್ಳತ್ತಡ್ಕ ಗ್ರಾಮದ ಶ್ರೀ ಹರಿಹರೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವವು ಫೆ.20, 21 ಹಾಗೂ 22 ರಂದು ನಡೆಯಲಿದ್ದು, ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಫೆ.04 ರಂದು ನಡೆಯಿತು.
ದೇವಸ್ಥಾನದಲ್ಲಿ ಪ್ರಾರ್ಥನೆಯನ್ನು ನೆರವೇರಿಸಿ ನಂತರ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕರಾದ ಸುಬ್ರಹ್ಮಣ್ಯ ನರಸಿಂಹ ಭಟ್, ಸಹ ಅರ್ಚಕರಾದ ಕೃಷ್ಣ ಕುಮಾರ್ ದೇವರಗದ್ದೆ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಕಿಶೋರ್ ಕುಮಾರ್ ಕೂಜುಗೋಡು, ಸದಸ್ಯರಾದ ಚಂದ್ರಹಾಸ ಶಿವಾಲ, ರೇಷ್ಮಾ ಕಟ್ಟೆಮನೆ, ಚಂದ್ರಶೇಖರ ಕಿರಿಭಾಗ, ಜ್ಯೋತಿ ಕಳಿಗೆ, ಶರತ್ ಡಿ.ಯಸ್, ದೇವಸ್ಥಾನದ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶೇಷಪ್ಪ ಗೌಡ ಕಿರಿಭಾಗ, ಜನಾರ್ಧನ ಗುಂಡಿಹಿತ್ಲು, ಪ್ರಭಾಕರ ಕಿರಿಭಾಗ, ಡಾ| ಸೋಮಶೇಖರ್ ಕಟ್ಟೆಮನೆ, ಕೇಶವಮೂರ್ತಿ ಪಲ್ಲತ್ತಡ್ಕ, ಲೋಕನಾಥ್ ಕಿರಿಭಾಗ, ಹೊನ್ನಪ್ಪ ಪೊಯ್ಯೆಮಜಲು, ನಿತ್ಯಾನಂದ ಭೀಮಗುಳಿ, ವೇದಾವತಿ ಮುಳ್ಳುಬಾಗಿಲು, ದಿನೇಶ್ ಕಿರಿಭಾಗ, ಅಂಬಿಕಾ ಗುಂಡಿಹಿತ್ಲು, ಮೋನಪ್ಪ ನೀರ್ಪಾಡಿ, ರೋಹಿತಾಶ್ವ ಪಲ್ಲತ್ತಡ್ಕ, ಸೀತಾರಾಮ್ ಹರಿಹರ ಹಾಗೂ ಪುನೀತ್ ಕರಂಗಲ್ಲು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಫೆ.14 ರಂದು ಶ್ರೀ ದೇವರ ಜಾತ್ರೋತ್ಸವಕ್ಕೆ ಗೊನೆ ಮುಹೂರ್ತ ನೆರವೇರಲಿದೆ.(ವರದಿ : ಉಲ್ಲಾಸ್ ಕಜ್ಜೋಡಿ)
