ಕಲ್ಮಡ್ಕ ಗ್ರಾಮದ ಹಿರಿಯ ಯಕ್ಷಗಾನ ಕಲಾವಿದ ರಾಮಣ್ಣ ಗೌಡ ರಾಮತ್ತಿಕಾರು ಫೆ.3 ರಂದು ಸಂಜೆ ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 73 ವರ್ಷ ವಯಸ್ಸಾಗಿತ್ತು.
ಹಲವಾರು ದಶಕಗಳಿಂದ ಕಲ್ಮಡ್ಕ ಸಂಗಮ ಕಲಾ ಸಂಘದಲ್ಲಿ ರಂಗತಯಾರಿ, ಅಭಿನಯ ತರಬೇತಿ, ಪರದೆ ತಯಾರಿ, ಯಕ್ಷರಂಗ ಪ್ರಸಾದನ, ವೇಷಭೂಷಣ ತಯಾರಿಕೆಯಲ್ಲಿ ಹೆಸರು ಗಳಿಸಿದ್ದ ಇವರು ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸೇರಿದಂತೆ ಅನೇಕ ಗೌರವ ಸನ್ಮಾನ ಸ್ವೀಕರಿಸಿದ್ದಾರೆ. ನಾಟಿ ವೈಧ್ಯರಾಗಿದ್ದ ಇವರು ಕಲ್ಮಡ್ಕ ಗ್ರಾ.ಪಂ. ಮಾಜಿ ಸದಸ್ಯರಾಗಿ, ಸಹಕಾರಿ ಸಂಘದ ಮಾಜಿ ನಿರ್ದೇಶಕರರಾಗಿ ಸೇವೆ ಸಲ್ಲಿಸಿದ್ದಾರೆ. ಮೃತರು ಪತ್ನಿ ಲಲಿತ, ಮಕ್ಕಳಾದ ವಾಸುದೇವ, ವಸಂತಕುಮಾರ, ವಂದನಾ, ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ.