
ದೇಶದ ಅಭಿವೃದ್ಧಿಯಾಗಬೇಕಾದರೇ ಹಳ್ಳಿಗಳು ಅಭಿವೃದ್ಧಿಯಾಗಬೇಕು. ಹಳ್ಳಿ ಹಳ್ಳಿಗಳನ್ನು ಸೇರಿಸುವ ನಿಟ್ಟಿನಲ್ಲಿ ಬಿಎಸ್ಎನ್ಎಲ್ ದೇಶದ ಅನೇಕ ಪ್ರದೇಶಗಳಲ್ಲಿ ಹೊಸ ಟವರ್ ನಿರ್ಮಿಸಿ 4G ಸೇವೆ ನೀಡುತ್ತಿದೆ. ಆದರೇ ಸುಳ್ಯ ತಾಲೂಕಿನ ಅನೇಕ ಗ್ರಾಮಗಳು ಸೇರಿದೆ. ಟವರ್ ನಿರ್ಮಾಣಗೊಂಡು ನೆಟ್ವರ್ಕ್ ಬಂದಾಗ ಅನೇಕ ಜನರು ಖುಷಿ ಪಟ್ಟರು. ಆದರೇ ಬಹುದಿನ ಉಳಿಯಲಿಲ್ಲ. ಸುಳ್ಯದ ಮಡಪ್ಪಾಡಿ, ಕಂದ್ರಪ್ಪಾಡಿ, ದೇವ, ಬಳ್ಳಕ್ಕ ಭಾಗದಲ್ಲಿ ಹಲವು ದಿನದಿಂದ ಬಿಎಸ್ಎನ್ಎಲ್ 4G ನೆಟ್ವರ್ಕ್ ಇಲ್ಲದೇ ಜನ ನೆಟ್ವರ್ಕ್ ಗಾಗಿ ಪರದಾಡುವಂತಾಗಿದೆ. ಇತರ ನೆಟ್ವರ್ಕ್ ನ ಸಿಮ್ ಗಳನ್ನು ಬಿಎಸ್.ಎನ್.ಎಲ್ ಗೆ ಬದಲಾವಣೆ ಮಾಡಿಕೊಂಡವರ ಗೋಳು ಹೇಳತೀರದು. ಈ ಬಗ್ಗೆ ಅಧಿಕಾರಿಗಳಿಗೆ ಕೇಳಿದರೆ ಹಾರಿಕೆಯ ಉತ್ತರ ನೀಡುತ್ತಾರೆ.ಬೇರೆ ಕಡೆ ಕೇಬಲ್ ಕಟ್ ಆಗಿದೆ, ಜಲಜೀವನ್ ನೀರಿನ ಪೈಪ್ ಅಳವಡಿಕೆಯ ಕಾರಣ ತೊಂದರೆ ಆಗುತ್ತಿದೆ ಎಂದು ಕಾರಣ ನೀಡುತ್ತಿದ್ದಾರೆ. ವಿದ್ಯುತ್ ಸಂಪರ್ಕ ಕಡಿತಗೊಂಡರೂ ಕೆಲ ಟವರ್ ಗಳಿಗೆ ಪರ್ಯಾಯ ವ್ಯವಸ್ಥೆ ಇಲ್ಲದೇ ತೊಂದರೆ ಅನುಭವಿಸುವಂತಾಗಿದೆ ಗ್ರಾಮಸ್ಥರು ಬಿಎಸ್ಎನ್ಎಲ್ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಪ್ರಯೋಜನ ಶೂನ್ಯ. ಜನ ಪ್ರತಿಭಟನೆ ನಡೆಸುವ ಮೊದಲು ಇಲಾಖೆ ಎಚ್ಚೆತ್ತು ವ್ಯವಸ್ಥೆ ಸರಿಪಡಿಸುವುದು ಒಳಿತು.
