ಪೆರಾಜೆ ದೇವಸ್ಥಾನದಲ್ಲಿ ನಡೆಯಲಿದ್ದ ಕಾರ್ಯಕ್ರಮದ ಅಂಗವಾಗಿ ಅನ್ಯಮತೀಯರಿಗೆ ಶಾಮಿಯಾನ ಹಾಕಲು ಅವಕಾಶ ನೀಡಲಾಗಿದೆ ಎಂದು ಆರೋಪಿಸಿ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿದ ಘಟನೆ ಇಂದು ವರದಿಯಾಗಿದೆ. ಸುಳ್ಯದ ಸಹನಾ ಶಾಮಿಯಾನ ದವರಿಗೆ ಅವಕಾಶ ನೀಡಿದ್ದಕ್ಕೆ ಸಂಘಟನೆಗಳು ಪ್ರತಿಭಟನೆ ನಡೆಸಿದ್ದರು. ನಾವು ಸ್ವಾತಿ ಸೌಂಡ್ಸ್ ನವರಿಗೆ ನೀಡಿದ್ದೇವು ಅವರು ಸಹನಾ ದವರಿಗೆ ಸಬ್ ಕಾಂಟ್ರಾಕ್ಸ್ ನೀಡಿದ್ದಾರೆ ಎಂದು ಆಡಳಿತ ಮಂಡಳಿ ಸಮಜಾಯಿಷಿ ನೀಡಿದ್ದು, ಮಾತುಕತೆಯ ಬಳಿಕ ಜಿ.ಜಿ.ನಾಯಕ್ ಅವರಿಗೆ ವಹಿಸಲಾಗಿದೆ ಎಂದು ತಿಳಿದುಬಂದಿದೆ. ಮೊಕ್ತೇಸರರಾದ ಜಿತೇಂದ್ರ ನಿಡ್ಯಮಲೆಯವರನ್ನು ಸಂಪರ್ಕಿಸಿದಾಗ ಅದೆಲ್ಲಾ ಸರಿಯಾಗಿದೆ ಎಂದಿದ್ದಾರೆ.
- Saturday
- April 19th, 2025