Ad Widget

ವಿದ್ಯಾಬೋಧಿನೀ ಪ್ರೌಢಶಾಲೆ ಬಾಳಿಲದಲ್ಲಿ ಶಾಲಾ ಸಂಸತ್ತು ಅಧಿವೇಶನ

ವಿದ್ಯಾಬೋಧಿನೀ ಪ್ರೌಢಶಾಲೆ ಬಾಳಿಲದಲ್ಲಿ ಶಾಲಾ ಸಂಸತ್ತು ಅಧಿವೇಶನ ಜ.27ರಂದು ಜರುಗಿತು. ವಿದ್ಯಾರ್ಥಿ ಸರಕಾರದ ಸಭಾಪತಿಯಾದ ಕುಲದೀಪ್ ಜಿ. ಎನ್ ಸಭಾಧ್ಯಕ್ಷತೆಯನ್ನು ವಹಿಸಿ ಸರ್ವರನ್ನು ಸ್ವಾಗತಿಸಿದರು. ಸಂಸದೀಯ ಕಾರ್ಯದರ್ಶಿಯಾದ ಬೃಂದಾ ಗತ ಅಧಿವೇಶನದ ವರದಿಯನ್ನು ಮಂಡಿಸಿ ಅನುಮೋದನೆಯನ್ನು ಪಡೆದರು. ಮುಖ್ಯಮಂತ್ರಿಯಾದ ಜಶ್ಮಿ ಎನ್ . ಸಿ ಸದನವನ್ನು ಉದ್ದೇಶಿಸಿ ಮಾತನಾಡಿದರು. ಬಳಿಕ ಕ್ರೀಡಾಕೂಟದ ಸಾಧನೆಗಳಿಗೆ ಅಭಿನಂದನಾ ಗೊತ್ತುವಳಿಯನ್ನು ಮನೀಷ್ ಜೆ. ಎನ್ ಮಂಡಿಸಿ ಅನುಮೋದನೆ ಪಡೆದರು. ಶಾಲಾ ವಾರ್ಷಿಕೋತ್ಸವದ ಯಶಸ್ವಿ ಸಂಘಟನೆ, ಶೈಕ್ಷಣಿಕ ಪ್ರವಾಸ, ಸಂಘಟನೆ ಇವುಗಳ ಬಗ್ಗೆ ಪ್ರೀತೇಶ್ ಅಭಿನಂದನಾ ಗೊತ್ತುವಳಿ ಮಂಡಿಸಿ ಅನುಮೋದನೆ ಪಡೆದರು. ಪ್ರತಿಭಾ ಕಾರಂಜಿ, ವಿಜ್ಞಾನ ಸ್ಪರ್ಧೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಜಸ್ವಿತಾ ಕೆ.ಎನ್ ಅಭಿನಂದನಾ ಗೊತ್ತುವಳಿ ಮಂಡಿಸಿ ಅನುಮೋದನೆಯನ್ನು ಪಡೆದರು. ನಂತರ ಇತ್ತೀಚಿಗೆ ನಿಧನರಾದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ, ಖ್ಯಾತ ಉದ್ಯಮಿ ರತನ್ ಟಾಟಾ, ಸಾಹಿತಿ ನಾ.ಡಿ’ಸೋಜ ಇವರಿಗೆ ಅಸಿಕಾ ಬಿ.ಯು ಸಂತಾಪ ಸೂಚಕ ಗೊತ್ತುವಳಿಯನ್ನು ಮಂಡಿಸಿದರು. ಪ್ರಚಲಿತ ವಿದ್ಯಮಾನಗಳಾದ ಮಹಾಕುಂಭ ಮೇಳ – ವಿಶೇಷತೆಗಳು ಎಂಬ ವಿಷಯದ ಬಗ್ಗೆ ಜೀವಿತ್ ಕೆ, HMPV – ವೈರಸ್ ಎಂಬ ವಿಷಯದ ಬಗ್ಗೆ
ನಂದನಾ ಮಾತನಾಡಿ ಸದನದ ಗಮನ ಸೆಳೆದರು. ಬಳಿಕ ನಡೆದ ಪ್ರಶ್ನೋತ್ತರ ಅವಧಿಯಲ್ಲಿ ವಿಪಕ್ಷ ನಾಯಕರು , ಸದಸ್ಯರು ಆಡಳಿತ ಪಕ್ಷದ ಲೋಪ ದೋಷಗಳ ಬಗ್ಗೆ ಹಲವು ಪ್ರಶ್ನೆಗಳನ್ನು ಕೇಳಿದರು. ಆಡಳಿತ ಪಕ್ಷದವರು ತಮ್ಮ ಕೆಲಸ ಕಾರ್ಯಗಳನ್ನು ಪ್ರಸ್ತಾಪಿಸಿ ಸಮರ್ಪಕ ಉತ್ತರಗಳನ್ನು ನೀಡಲು ಪ್ರಯತ್ನಿಸಿದರು. ಶೂನ್ಯ ವೇಳೆಯಲ್ಲಿ ಕೆಲವು ವಿಚಾರಗಳನ್ನು ಗಮನಕ್ಕೆ ತಂದರು. ಕೊನೆಯದಾಗಿ ಸಭಾಪತಿಗಳು ಸಂಸತ್ತಿನ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿ ಆಡಳಿತ ಪಕ್ಷ ಮತ್ತು ವಿಪಕ್ಷದವರ ಕರ್ತವ್ಯವನ್ನು ನೆನಪಿಸಿಕೊಂಡು, ಸದನದ ಕಾರ್ಯ ಕಲಾಪಗಳಲ್ಲಿ ಸಕ್ರಿಯರಾದ ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು. ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು.

. . . . . . . . .

ಶಾಲಾ ಮುಖ್ಯ ಗುರುಗಳಿಂದ ನಿರ್ದೇಶಸಲ್ಪಟ್ಟ ಕಾರ್ಯಕ್ರಮವು ಎಲ್ಲಾ ಶಿಕ್ಷಕರ ಸಹಕಾರದೊಂದಿಗೆ ಯಶಸ್ವಿಯಾಗಿ ಸಂಪನ್ನಗೊಂಡಿತು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading