
ಅಡ್ಕಾರುಮನೆ-ಜಾಲ್ಸೂರು ಬಾಳಾಜೆ ಎಂಬಲ್ಲಿ ಜ.26 ರಂದು ಶ್ರೀ ಧೂಮಾವತಿ ಹಾಗೂ ಗುಳಿಗ ದೈವಗಳ ನೇಮೋತ್ಸವವು ನಡೆಯಿತು.
ಬೆಳಿಗ್ಗೆ ಶ್ರೀ ಗಣಪತಿ ಹವನ ನಡೆದು ಸಂಜೆ ಶ್ರೀ ದೈವಗಳ ಭಂಡಾರ ತೆಗೆಯುವುದು ಹಾಗೂ ಎಣ್ಣೆಬೂಳ್ಯ ನಡೆಯಿತು. ನಂತರ ರಾತ್ರಿ ಅನ್ನಸಂತರ್ಪಣೆ ನಡೆದು ಶ್ರೀ ಧೂಮಾವತಿ ಹಾಗೂ ಗುಳಿಗ ದೈವಗಳ ನೇಮೋತ್ಸವವು ನಡೆದು ಪ್ರಸಾದ ವಿತರಣೆಯೊಂದಿಗೆ ನೇಮೋತ್ಸವವು ಸಂಪನ್ನಗೊಂಡಿತು.(ವರದಿ : ಉಲ್ಲಾಸ್ ಕಜ್ಜೋಡಿ)
